ಜಿಲ್ಲೆ

ಸೋಂಕಿತರನ್ನು ತಿರಸ್ಕಾರದಿಂದ ನೋಡಬೇಡಿ

Mandya

ವಿಜಯವಾಣಿ ಸುದ್ದಿಜಾಲ ನಾಗಮಂಗಲ

ಕರೊನಾ ಸೋಂಕಿತ ಮತ್ತು ಅವರ ಕುಟುಂಬವನ್ನು ತಿರಸ್ಕಾರದಿಂದ ನೋಡಬಾರದು ಎಂದು ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಂಕಿನಿಂದ ಮೃತಪಟ್ಟವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಮೃತರಿಗೆ ಸಲ್ಲಿಸಬೇಕಾದ ಸಂಸ್ಕಾರದ ಗೌರವ ಸಿಗಬೇಕು. ಆ ಮೂಲಕ ಮಾನವೀಯತೆ ಉಳಿಸಬೇಕು ಎಂದು ಕಳಕಳಿ ವ್ಯಕ್ತಪಡಿಸಿದರು.

ಯೋಗಾಭ್ಯಾಸದ ಮೂಲಕ ಉಸಿರಾಟದ ಸಮಸ್ಯೆಯನ್ನು ದೂರ ಇಡಬಹುದು. ಹಾಗಾಗಿ ಪ್ರತಿಯೊಬ್ಬರೂ ಆರೋಗ್ಯ ಕಾಳಜಿ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.