ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜ್ಞಾನ ಭಾರತ್ ವೃಂದ ಬಾಲಸಂಸ್ಕಾರದ ವತಿಯಿಂದ ಶ್ರೀ ಕೃಷ್ಣ ಲೀಲೋತ್ಸವ ರೂಪಕ ಪ್ರಸ್ತುತಪಡಿಸಲಾಯಿತು 
ಜಿಲ್ಲೆ

ಘರ್ಷಣೆಗಳಿಗೆ ಭಗವದ್ಗೀತೆಯಲ್ಲಿ ಉತ್ತರ

ಇಂದಿರಾ ಎನ್ ಕೆ

ಕಾರ್ಕಳ: ಬದುಕಿಗೆ ಧೈರ್ಯ ತುಂಬುವ ಏಕೈಕ ಗ್ರಂಥ ಭಗವದ್ಗೀತೆ. ನಮ್ಮ ಪಾತ್ರದಲ್ಲಿ ಅರ್ಜುನನಿದ್ದರೆ, ಸಾರಥಿಯ ಪಾತ್ರದಲ್ಲಿ ಕೃಷ್ಣ ಮಾರ್ಗದರ್ಶಕನಾಗಿದ್ದಾನೆ. ಇಂದಿನ ಎಲ್ಲ ರೀತಿಯ ಒತ್ತಡ, ಘರ್ಷಣೆಗಳಿಗೆ ಭಗವದ್ಗೀತೆಯಲ್ಲಿ ಉತ್ತರ ಅಡಗಿದೆ ಎಂದು ಉತ್ತಮ ನರಸಿಂಹದಾಸ್(ಉಮೇಶ್ ಕಾಮತ್) ಹೇಳಿದರು.

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜ್ಞಾನ ಭಾರತ್ ವೃಂದ ಬಾಲಸಂಸ್ಕಾರದ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮದಲ್ಲಿ ಭಗವದ್ಗೀತೆ ಕುರಿತು ಉಪನ್ಯಾಸ ನೀಡಿದರು. ಬಾಲ ಸಂಸ್ಕಾರದ ಬಾಲಕ-ಬಾಲಕಿಯರು ಶ್ರೀ ಕಷ್ಣನ ಬಾಲಲೀಲೆ ಸಾರುವ ಶ್ರೀ ಮದ್ ಭಾಗವತದಿಂದಾಯ್ದ ಶ್ರೀ ಕೃಷ್ಣ ಲೀಲೋತ್ಸವ ರೂಪಕ ಪ್ರಸ್ತುತ ಪಡಿಸಿದರು.

ಜ್ಞಾನಭಾರತ್ ವೃಂದದ ಗೌರವಾಧ್ಯಕ್ಷ, ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ವೃಂದದ ಅಧ್ಯಕ್ಷ ದಿನೇಶ್ ಎಂ.ಕೊಡವೂರ್, ಉಷಾ ರಾವ್ ಯು., ಸಂಚಾಲಕ ಸುಮಿತ್, ರಾಜ್‌ಕಿರಣ್, ರಶ್ಮಿ ಭಟ್, ಪ್ರಜ್ವಲಾ ಶೆಣೈ, ಪ್ರತಿಮಾ ಭೋರ್ಕರ್, ಅಕ್ಷತಾ ನಾಯಕ್, ಕಮಲಾಕ್ಷ ನಾಯಕ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.