ಮಾಡಸಿರವಾರ ಗ್ರಾಮದಲ್ಲಿ ಮಂಗಳವಾರ ಶ್ರೀ ಕರಿಯಪ್ಪ ತಾತನ ಉಚ್ಚಾಯ ಅದ್ದೂರಿಯಾಗಿ ಜರುಗಿತು. 
ಜಿಲ್ಲೆ

ಶ್ರೀ ಕರಿಯಪ್ಪ ತಾತನ ಉಚ್ಚಾಯ ಅದ್ದೂರಿ

ನರೇಶ್ ಕುಮಾರ್

ಸಿಂಧನೂರು: ತಾಲೂಕಿನ ಮಾಡಸಿರವಾರ ಗ್ರಾಮದಲ್ಲಿ ಶ್ರಾವಣಮಾಸದ ಅಂಗವಾಗಿ ಮಂಗಳವಾರ ಸಂಜೆ ಶ್ರೀ ಕರಿಯಪ್ಪ ತಾತನ ಜಾತ್ರೆ ನಿಮಿತ್ತ ಉಚ್ಚಾಯ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ ಕರಿಯಪ್ಪ ತಾತನ ಮೂರ್ತಿಗೆ ವಿಶೇಷ ಪೂಜೆ, ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ನಂತರ ಪಲ್ಲಕ್ಕಿ ಸೇವೆ, ಭಜನೆ ವಾದ್ಯದೊಂದಿಗೆ ಗಂಗಾಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಅನ್ನ ಸಂತರ್ಪಣೆ ನಡೆಯಿತು.

ಸಂಜೆ 5 ಗಂಟೆಗೆ ಉಚ್ಚಾಯ ಸೇವೆ ವಿಜೃಂಭಣೆಯಿಂದ ನೆರವೇರಿತು. ಗೋಮರ್ಸಿ, ಮಾಡಸಿರವಾರ, ಕನ್ನಾರಿ, ಬೆಳಗುರ್ಕಿ, ಅಲಬನೂರು, ಗಿಣಿವಾರ, ಬಾದರ್ಲಿ, ಹರಟೆನೂರು, ಒಳಬಳ್ಳಾರಿ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.