ಗಂಗಾವತಿ: ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ನವವೃಂದಾವನಗಡ್ಡಿಯಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಶ್ರೀ ಜಯತೀರ್ಥ ಅಷ್ಟೋತ್ತರ ಪಾರಾಯಣ ಮತ್ತು ಉಪನ್ಯಾಸ ಕಾರ್ಯಕ್ರಮ ಭಾನುವಾರ ನಡೆಯಿತು.
ಶ್ರೀ ಜಯತೀರ್ಥರ ವೃಂದಾವನ ಸೇರಿ 9 ಯತಿವರ್ಯರಿಗೆ ಬೆಳಗ್ಗೆ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು. ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ಪ್ರಮುಖರೊಂದಿಗೆ ವಿವಿಧ ಜಿಲ್ಲೆಯ ವಿಪ್ರ ಸಮಾಜದವರು ಅಷ್ಟೋತ್ತರ ಪಾರಾಯಣ ಮಾಡಿದರು. ಶ್ರೀಮಠದ ಪ್ರತಿನಿಧಿ ಸುಳಾದಿ ಹನುಮೇಶಾಚಾರ್ ಮಾತನಾಡಿ, ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರ ಅಜ್ಞಾನುಸಾರ ಪ್ರತಿ ಮಾಸಿಕ ಅಷ್ಟೋತ್ತರ ಪಾರಾಯಣ ಮತ್ತು ವಿದ್ವಾಂಸರಿಂದ ಉಪನ್ಯಾಸ ಹಮ್ಮಿಕೊಳ್ಳಲಾಗುತ್ತಿದೆ. ಮಾ.9ರಂದು ಜರುಗಲಿರುವ ಶ್ರೀ ಸುಧೀಂದ್ರ ತೀರ್ಥರ ಆರಾಧನೆ ಮಹೋತ್ಸವದಲ್ಲಿ ಮಂತ್ರಾಲಯದ ಮಠದ ಶ್ರೀ ಸುಬುಧೇಂದ್ರ ತೀರ್ಥರು ಸಾನ್ನಿಧ್ಯವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರಾಧ್ಯಾಪಕರಾದ ನಿಖಿಲಾಚಾರ್ಯ, ಪಿ.ಎಚ್.ರಾಘವೇಂದ್ರಾಚಾರ್, ಹರೀಶಾಚಾರ್, ಸುಬ್ರಹ್ಮಣ್ಯಾಚಾರ್, ಕೇಶವಾಚಾರ್, ಶ್ರೀಕರ್ ಆಚಾರ್ಯ ತಂತ್ರಿ, ಆನೆಗೊಂದಿ ಮಠದ ವ್ಯವಸ್ಥಾಪಕ ಸುಮಂತ ಕುಲ್ಕಣಿ ಇತರರಿದ್ದರು.