ಶ್ರೀ ಗುಳ್ಳಮ್ಮದೇವಿ  
ಜಿಲ್ಲೆ

ಶ್ರೀ ಗುಳ್ಳಮ್ಮ ದೇವಿ ಜಾತ್ರೆ ಸಂಪನ್ನ

ಎಸ್.ಎನ್.ರವೀಂದ್ರ

ಬೀರೂರು: ಬೀರೂರು ಬಳ್ಳಾರಿ ಕ್ಯಾಂಪ್ ಶ್ರೀ ಗುಳ್ಳಮ್ಮ ದೇವಿ ಅಮ್ಮನವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಮಂಗಳವಾರ ಸಂಪನ್ನಗೊಂಡಿತು.

ಭಾನುವಾರ ಧ್ವಜಾರೋಹಣದೊಂದಿಗೆ ಆರಂಭವಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಸೋಮವಾರ ಗಣಂಗಳ ಪೂಜೆ ನೆರವೇರಿಸಲಾಯಿತು. ಮೂಲಮೂರ್ತಿಯನ್ನು ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಮಂಗಳವಾರ ಬೆಳಗಿನ ಜಾವ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕೆಂಡಾರ್ಚನೆಯಲ್ಲಿ ಭಕ್ತರು ಪಾಲ್ಗೊಂಡರು. ಹರಕೆ ಹೊತ್ತಿದ್ದ ಭಕ್ತರು ಕೆಂಡ ಹಾದು ಹರಕೆ ತೀರಿಸಿದರು. ನಂತರ ಪುಷ್ಪಗಳಿಂದ ಅಲಂಕರಿಸಿದ್ದ ಮಂಟಪದಲ್ಲಿ ಅಮ್ಮನವರ ಉತ್ಸವಮೂರ್ತಿ ಪ್ರತಿಷ್ಠಾಪಿಸಿ ವಿವಿಧ ವಾದ್ಯಗೋಷ್ಠಿ ಮೂಲಕ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಉತ್ಸವ ನಡೆಸಲಾಯಿತು. ಮಧ್ಯಾಹ್ನ ಬೇವಿನಸೀರೆ ಸೇವೆ, ಮಹಾಮಂಗಳಾರತಿ ನಡೆಯಿತು. ರಾತ್ರಿ ಪ್ರಸಾದ ವಿನಿಯೋಗದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಜಾತ್ರಾ ಮಹೋತ್ಸವದಲ್ಲಿ ಒಕ್ಕಲು, ದೇವಾಸ್ಥಾನ ಸಮಿತಿ, ಹಾಗೂ ಸ್ಥಳೀಯರು ಭಾಗವಹಿಸಿದ್ದರು.