ಜಿಲ್ಲೆ

ಬಾಲಗಂಗಾಧರ ತಿಲಕ್ ಚಿಂತನೆಯಿಂದ ಧಾರ್ಮಿಕ ಕ್ರಾಂತಿ: ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ

ಕಾಸರಗೋಡು: ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ಬಾಲಗಂಗಾಧರ ತಿಲಕ್ ಅವರಲ್ಲಿ ಹುಟ್ಟಿಕೊಂಡಿದ್ದ ಗಣೇಶೋತ್ಸವದದ ಚಿಂತನೆ ಇಂದು ದೇಶದಲ್ಲಿ ಬಲುದೊಡ್ಡ ಧಾರ್ಮಿಕ ಕ್ರಾಂತಿಗೆ ಕಾರಣ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.

ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆ.27ರಿಂದ ಸೆ.6ರ ವರೆಗೆ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಪ್ತತಿ ಮಹೋತ್ಸವದ ಸಮಿತಿ ರಚನಾ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ವಕೀಲ ಪಿ. ಮುರಳೀಧರನ್ ಅಧ್ಯಕ್ಷತೆ ವಹಿಸಿದ್ದರು. ಚಿನ್ಮಯ ಮಿಷನ್ ಕೇರಳ ಟಕ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಶುಭಹಾರೈಸಿದರು. ಕುಂಟಾರು ರವೀಶ ತಂತ್ರಿ, ಆರೆಸ್ಸೆಸ್ ಕಾಸರಗೋಡು ಜಿಲ್ಲಾ ಸಂ ಚಲಕ್ ಪ್ರಭಾಕರನ್ ಉಪಸ್ಥಿತರಿದ್ದರು. ಸಮಿತಿ ಗೌರವಾಧ್ಯಕ್ಷ ಜಗನ್ನಾಥ್ ಸಮಿತಿ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಛಾಯಾಶ್ರೀ ಮತ್ತು ವೈಭವಿ ಪ್ರಾರ್ಥನೆ ಹಾಡಿದರು. ಕೆ.ಎನ್. ಕಮಲಾಕ್ಷನ್ ಸ್ವಾಗತಿಸಿದರು. ದೇವದಾಸ್ ನುಳ್ಳಿಪ್ಪಾಡಿ ನಿರೂಪಿಸಿದರು. ಕಮಲಾಕ್ಷ ಬೀರಂತಬೈಲು ವಂದಿಸಿದರು.

ಹಿಂದು ಸಮಾಜ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಜಾತಿ, ಭಾಷೆ ದೂರವಿರಿಸಿ ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಹಿಂದು ಸಮಾಜ ಒಗ್ಗಟ್ಟಿನಿಂದ ಎದುರಿಸಬೇಕಾದ ಅನಿವಾರ್ಯತೆಯಿದೆ. ಸ್ವಾಮಿ ವಿವಿಕ್ತಾನಂದ ಸರಸ್ವತಿ ಚಿನ್ಮಯ ಮಿಷನ್ ಕೇರಳ ಘಟಕ ಮುಖ್ಯಸ್ಥ