ಜಿಲ್ಲೆ

ಶ್ರೀದೇವಿ ಪುರಾಣ ಆರಂಭ

Kopala - Desk - Eraveni

ಮಾನ್ವಿ: ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದ ಶ್ರೀ ತಾಯಮ್ಮದೇವಿ ದೇವಸ್ಥಾನದಲ್ಲಿ 42ನೇ ವಷರ್ದ ಶ್ರೀದೇವಿ ಪುರಾಣ ಅ.15 ರವಿವಾರ ರಿಂದ ಅ.24 ರವರೆಗೆ ಸಂಜೆ 7ರಿಂದ ಪ್ರವಚನ ಜರುಗಲಿದೆ.

ಅ.24 ರಂದು ಮಂಗಳವಾರ ತಾಯಮ್ಮದೇವಿಗೆ ರುದ್ರಾಭಿಷೇಕ ಮಾಡಲಾಗುವುದು. ಶ್ರೀದೇವಿ ಪುರಾಣದ ಪ್ರವಚನವನ್ನು ಡಾ.ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯಂದಿರಾದ ವಿಶ್ವರಾಧ್ಯ ಸ್ವಾಮಿ, ಶ್ರೀವೀರೇಶ್ವರ ಪುಣ್ಯಾಶ್ರಮ ಗದಗ, ಪುರಾಣ ವಾಚಕರು ಕುಮಾರಸ್ವಾಮಿ ಹಿರೇಮಠ, ತಬಲಾ ವಾದಕರು ಆದರ್ಶ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮಕ್ಕೆ ಒಳಬಳ್ಳಾರಿ ಸುವರ್ನಗಿರಿ ವಿರಕ್ತಮಠದ ಸಿದ್ದಲಿಂಗ ಸ್ವಾಮಿಗಳು ಅಡವಿ ಅಮರೇಶ್ವರ ಮಠದ ಶ್ರೀಶಾಂತಮಲ್ಲ ಮಹಾಸ್ವಾಮಿಗಳು, ಮಹಾಂತೇಶ್ವರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಚಿಕಲಪರ್ವಿ ರುದ್ರಮುನೀಶ್ವರ ಮಠದ ಶ್ರೀಸದಾಶಿವ ಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಆರ್ಚಕ ಅಭಿಷೇಕಸ್ವಾಮಿ ದದ್ದಲಮಠ ಹಿರೇಕೊಟ್ನೆಕಲ್ ತಿಳಿಸಿದ್ದಾರೆ.