filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (0.35555556, 0.35555556); modeInfo: ; sceneMode: Night; cct_value: 0; AI_Scene: (13, -1); aec_lux: 0.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಶ್ರೀ ಚೀರುಂಬಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶೇ.20 ಡಿವಿಡೆಂಡ್ ಘೋಷಣೆ

Mangaluru - Hariprasad Rai


ಮಂಗಳೂರು : ಶ್ರೀ ಚೀರುಂಬಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ಇದರ 31ನೇ ವಾರ್ಷಿಕ ಮಹಾಸಭೆ ಅಶೋಕನಗರದ
ದೇವಾಂಗ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಸತ್ಯನಾರಾಯಣ.ಕೆ. ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ವ್ಯವಸ್ಥಾಪಕ ವಿಜಯಕುಮಾರ್ ವಾರ್ಷಿಕ ವರದಿ, ಲೆಕ್ಕ ಪರಿಶೋಧಿತಾ ಆರ್ಥಿಕ ತಖ್ತೆ ಸಭೆಗೆ ಮಂಡಿಸಿದರು. 2023-24 ನೇ ಸಾಲಿನಲ್ಲಿ ಅತ್ಯುತ್ತಮ ವ್ಯವಹಾರ ನಡೆಸಿದ ಶಾಖೆಗಳಿಗೆ ಪ್ರಶಸ್ತಿ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿತು.
ಸಂಘವು 2023-24 ನೇ ಸಾಲಿನಲ್ಲಿ 1,40,18,556 ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಡಿವಿಡೆಂಡ್ ಒಟ್ಟು 38.85 ಲಕ್ಷ ರೂ.ಮೊತ್ತವನ್ನು ಶೇ.20ರಂತೆ ವಿತರಿಸಲಾಗಿದೆ.ವರದಿ ಸಾಲಿನಲ್ಲಿ 136.20 ಕೋಟಿ ರೂ ಸಾಲ ವಿತರಿಸಲಾಗಿದೆ. ಮಾರ್ಚ್ ಅಂತ್ಯಕ್ಕೆ 69.81 ಕೋಟಿ ರೂ. ಸದಸ್ಯರ ಹೊರ ಬಾಕಿ ಸಾಲ ಇದೆ. ಸಂಘದಲ್ಲಿ ಒಟ್ಟು 2.17 ಕೋಟಿ ರೂ.ಪಾಲು ಬಂಡವಾಳ ಹಾಗೂ 78 ಕೋಟಿ ರೂ.ಠೇವಣಾತಿ ಹೊಂದಿದೆ. ಸಂಘವು ಮಾರ್ಚ್ ಅಂತ್ಯಕ್ಕೆ 89 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ಅಧ್ಯಕ್ಷ ಸತ್ಯನಾರಾಯಣ.ಕೆ. ಸಭೆಗೆ ತಿಳಿಸಿದರು.
ಸಂಘವು ಮಂಗಳೂರಿನಲ್ಲಿ ಜರಗಿದ 70ನೇ ಅಖಿಲ ಭಾರತ ಸಹಕಾರಿ ಸಪ್ತಾಹದ 2023ರ ರಾಜ್ಯ ಮಟ್ಟದ ಸಮಾರಂಭದಲ್ಲಿ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಸತತವಾಗಿ 8ನೇ ವರ್ಷ ಸಾಧನಾ ಪ್ರಶಸ್ತಿ ಪಡೆದಿದೆ. 31 ವರ್ಷದಿಂದ ಸಂಘವು ಲಾಭದಾಯಕವಾಗಿ ಮುನ್ನಡೆಯುತ್ತಿದೆ. 2023-24 ನೇ ಸಾಲಿನಲ್ಲಿ ಶೇ.100 ಸಾಲ ವಸೂಲಾತಿ ಮಾಡಲಾಗಿದೆ. ಶೀಘ್ರದಲ್ಲಿ ಪಡೀಲ್ ನಾಗುರಿ ಪರಿಸರದಲ್ಲಿ ಹೊಸ ಶಾಖೆ ತೆರೆಯುವುದಾಗಿ ಅವರು ತಿಳಿಸಿದರು.
ಸಂಘದ ನಿರ್ದೇಶಕರಾದ ರಾಮು .ಎಂ., ಭಾಸ್ಕರ್ ಮಂಗಲ್ಪಾಡಿ, ಸುಜಾತ ಶೇಖರ್, ಜಗದೀಶ್ ಶೆಟ್ಟಿ, ರಮೇಶ್.ಕೆ., ದೇವದಾಸ್.ಬಿ.,ವಿ. ಪದ್ಮನಾಭ ನಾಯ್ಕ, ಸುಧೀರ್ ಶೆಟ್ಟಿಗಾರ್, ವಿಜಯ, ಆಹ್ವಾನಿತ ಸದಸ್ಯ ಉಪೇಂದ್ರ ಕುಮಾರ್. ಎಂ. ಉಪಸ್ಥಿತರಿದ್ದರು. ಸಂಘದಉಪಾಧ್ಯಕ್ಷೆ ಶಾಂತಾ.ಆರ್.ವಂದಿಸಿದರು.