ಬಂಟ್ವಾಳ: ಮಾರ್ನಬೈಲು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಆಡಳಿತ ಟ್ರಸ್ಟ್ ಆಡಳಿತಕ್ಕೆ ಒಳಪಟ್ಟ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಹಾಗೂ ಭೂ ಖರೀದಿ ಬಗ್ಗೆ ಭಾನುವಾರ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ನೀಡಿ ಮಂದಿರದ ಸಮಿತಿ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದರು.
ಶ್ರೀ ಅಯ್ಯಪ್ಪ ಸನ್ನಿಧಿಯಲ್ಲಿ ಪ್ರಾರ್ಥನೆ ನೆರವೇರಿಸಿ ಸಂಜೀವ ಗುರುಸ್ವಾಮಿ ಹಾಗೂ ಕೃಷ್ಣ ಗುರುಸ್ವಾಮಿ ದೇವರ ಪ್ರಸಾದ ನೀಡಿ ಅಭಿನಂದಿಸಿದರು. ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮ ಪೂಜಾರಿ ವಹಿಸಿದ್ದರು. ಉಪಾಧ್ಯಕ್ಷ ಬಿ.ದಿನೇಶ್ ನಾಯಕ್ ಉಪಸ್ಥಿತರಿದ್ದರು. ದಾಮೋದರ ಬಿ.ಎಂ. ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಮುಖರಾದ ಸುಬ್ರಾಯ ಕಾರಂತ ಕಾನ್ಸಾಲೆ, ಮುಗುಳಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಟ್ರಸ್ಟ್ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಗಟ್ಟಿ ಮಾರ್ನಬೈಲು, ನಾಗನವಳಚ್ಚಿಲು ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಸ್ವರ್ಣ ಮಹೋತ್ಸವ ಅಧ್ಯಕ್ಷ ಸಂದೀಪ್ ಕುಮಾರ್, ಸಜೀಪಮುನ್ನೂರು ಯುವಕ ಸಂಘದ ಅಧ್ಯಕ್ಷ ಜಗದೀಶ್ ಐತಾಳ್ ಕಂದೂರು,ಪ್ರಮುಖರಾದ ಮಾರ್ನಬೈಲು ಭಂಡಾರಮನೆ ಪ್ರಧಾನ ಸಂದೇಶ್ ಗಟ್ಟಿ, ಚಂದ್ರಶೇಖರ ಗಟ್ಟಿ, ಯಾದವ ಬಂಗೇರ, ಯಶವಂತ್ ಕೆ. ಪುತ್ತೂರು, ಗಣೇಶ್ ಗುಡ್ಡೆಯಂಗಡಿ, ವಿಶ್ವನಾಥ ಆಚಾರ್ಯ, ಸೋಮನಾಥ ಬಿ.ಎಂ, ಅಶೋಕ್ ಗಟ್ಟಿ ಕಟ್ಲೆಮಾರ್, ಪ್ರಶಾಂತ್ ಗಟ್ಟಿ ಮಾರ್ನಬೈಲು, ಪ್ರಸನ್ನ ಆಚಾರ್ಯ, ಪ್ರಶಾಂತ್ ಆಚಾರ್ಯ, ಕೃಷ್ಣಪ್ಪ ಬಂಗೇರ ಕಂಚಿಲ, ದಯಾನಂದ ಬಿ.ಎಂ, ಗೋಪಾಲ ಪೂಜಾರಿ, ಲಕ್ಷ್ಮಣ್ ಗಟ್ಟಿ, ಅಶ್ವಿನ್ ಮಾರ್ನಬೈಲು, ಯೋಗೀಶ್ ಗಟ್ಟಿ ಮೊದಲಾದವರಿದ್ದರು.