ಮೈಸೂರು: ನಗರದ ಚಾಮುಂಡಿಬೆಟ್ಟದ ತಪ್ಪಲಿನ ಶಬರಿಮಲೆ ಶ್ರೀ ಅಯ್ಯಪ್ಪ ಪೂಜಾ ಸಮಿತಿಯ ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಶ್ರೀ ಗುರುವಾಯೂರಪ್ಪನ್ ದೇವಾಲಯದ 63ನೇ ವಾರ್ಷಿಕ ಪೂಜಾ ಮಹೋತ್ಸವವನ್ನು ಡಿ.16ರಿಂದ ಮೂರು ದಿನಗಳ ಕಾಲ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಆರ್.ಹರಿದಾಸ್ ತಿಳಿಸಿದರು.
ಪಳ್ಳಿಯುಣರ್ತಲ್, ಗಣಪತಿ ಹೋಮ, ತುಪ್ಪದ ಅಭಿಷೇಕ ವಾದ್ಯದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಅಲಂಕಾರ ಪೂಜೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಅನ್ನದಾನ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಿತಿಯ ಉಪಾಧ್ಯಕ್ಷ ಕೃಷ್ಣೋಜಿರಾವ್, ಖಜಾಂಚಿ ಇ.ಎನ್.ಸುರೇಶನ್, ಉಸ್ತುವಾರಿ ಸುನೀಲ್ ಕುಮಾರ್, ಕೆ.ಎನ್.ಬಸವರಾಜು ಇದ್ದರು.