ಗುರುಗುಂಟಾ ಅಮರೇಶ್ವರ ದೇವಸ್ಥಾನದಲ್ಲಿ ಗೋವಿಗೆ ಪೂಜೆ ಸಲ್ಲಿಸಲಾಯಿತು. 
ಜಿಲ್ಲೆ

ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಗೋ ಪೂಜೆ

ಲಿಂಗಸುಗೂರು: ಇಲ್ಲಿನ ಗುರುಗುಂಟಾ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಬಲಿಪಾಡ್ಯಮಿ ದಿನವಾದ ಬುಧವಾರ ಶಾಸ್ತ್ರೋಕ್ತವಾಗಿ ಗೋ ಪೂಜೆ ನೆರವೇರಿಸಲಾಯಿತು.

ಹಿಂದು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಬಲಿ ಪಾಡ್ಯಮಿಯಂದು ಕಡ್ಡಾಯ ಮತ್ತು ಶಾಸ್ತ್ರೋಕ್ತವಾಗಿ ಗೋ ಪೂಜೆ ಮಾಡಬೇಕೆಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಹೀಗಾಗಿ ಬುಧವಾರ ಗುರುಗುಂಟಾದಲ್ಲಿ ಗೋವಿಗೆ ಸ್ನಾನ ಮಾಡಿಸಿ ದೇವಾಲಯಕ್ಕೆ ಕರೆತಂದು ಬಳಿಕ ಅರಿಶಿಣ, ಕುಂಕುಮ ಹಚ್ಚಿ ಹೂವಿನ ಹಾರ ಹಾಕಲಾಯಿತು. ಅಕ್ಕಿ, ಬೆಲ್ಲ, ಧೂಪಗಳಿಂದ ವಿಶೇಷ ಪೂಜೆ ಮಾಡಲಾಯಿತು.