ಕದ್ರಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥನದ ಅವಭೃತ ಉತ್ಸವ ನಡೆಯಿತು. 
ಜಿಲ್ಲೆ

ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ರಥಬೀದಿಯಲ್ಲಿ ಯುಗಾದಿ ಮಹೋತ್ಸವದ ಅವಭೃತ ಉತ್ಸವ

Shravan Kumar Nala

ಮಂಗಳೂರು: ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ರಥಬೀದಿಯಲ್ಲಿ ಯುಗಾದಿ ಮಹೋತ್ಸವದ ಅವಭೃತ ಉತ್ಸವ ಶನಿವಾರ ನಡೆಯಿತು. ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಪಲ್ಲಕ್ಕಿಯಲ್ಲಿ ತೆರಳಿ, ಕದ್ರಿಯ ಕೆರೆಯಲ್ಲಿ ಜಳಕ ನಡೆದು, ಕ್ಷೇತ್ರಕ್ಕೆ ಆಗಮಿಸಿ, ಧ್ವಜಾವರೋಹಣ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ, ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ, ಮೂರನೇ ಮೊಕ್ತೇಸರ ಎ.ಲೋಕೇಶ್ ಆಚಾರ್ಯ ಚಿಲಿಂಬಿ, ಕ್ಷೇತ್ರದ ಆಡಳಿತ ಮಂಡಳಿಯ ಸದಸ್ಯ ಕಾಳಿಕಾಂಬಾ ಸೇವಾ ಸಮಿತಿ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿ, ದ. ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ವಿಶ್ವಕರ್ಮ ಯುವ ವೇದಿಕೆ, ವಿಶ್ವಕರ್ಮ ಯುವ ಮಿಲನದ ಸದಸ್ಯರು, ಶ್ರೀ ಗುರು ಸೇವಾ ಪರಿಷತ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.