ಕಲ್ಲತ್ತಿಗಿರಿ ಶ್ರೀ ವೀರಭದ್ರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ನಡೆಯಿತು.  
ಜಿಲ್ಲೆ

ಶ್ರೀ ವೀರಭದ್ರೇಶ್ವರ ಅದ್ದೂರಿ ರಥೋತ್ಸವ

ಲಿಂಗದಹಳ್ಳಿ: ಕಲ್ಲತ್ತಿಗಿರಿ ಶ್ರೀ ವೀರಭದ್ರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಬೆಳಗ್ಗೆ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವ ಸಂದರ್ಭದಲ್ಲಿ ಕಲ್ಲತ್ತಿಗಿರಿಯ ಕ್ಷೇತ್ರ ದೇವತೆ ಶ್ರೀ ಕಟ್ಟಿನ ಚೌಡೇಶ್ವರಿ ದೇವಿ, ಕೃಷ್ಣಾಪುರ ಗ್ರಾಮದ ಕೆಪ್ಪ ಚೌಡೇಶ್ವರಿ ದೇವಿ, ಮತ್ತು ಗಂಗೂರಿನ ಗ್ರಾಮ ದೇವತೆ ಗಂಗೂರಮ್ಮ ದೇವಿ ಸೇರಿದಂತೆ ವಿವಿಧ ದೇವತೆಗಳು ಆಗಮಿಸಿದ್ದರಿಂದ ಜಾತ್ರೆಗೆ ಮೆರುಗು ಬಂದಿತ್ತು.
ರಥೋತ್ಸವ ಸಂದರ್ಭದಲ್ಲಿ ಗರುಡ ಆಕಾಶದಲ್ಲಿ ಹಾರಾಡುತ್ತ್ತ ರಥದ ಸುತ್ತ ಪ್ರದಕ್ಷಿಣೆ ಹಾಕಿದ್ದನ್ನು ಕಂಡ ಭಕ್ತರು ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಜೈಕಾರ ಹಾಕಿದರು.
ಲಿಂಗದಹಳ್ಳಿ ಕೃಷ್ಣಾಪುರ, ಗಂಗೂರು, ನಂದಿಬಟ್ಟಲು, ಕಲ್ಲತ್ತಿಪುರ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ರಥಕ್ಕೆ ಕಾಳುಮೆಣಸು, ಬಾಳೆಹಣ್ಣು, ದವಸ, ಧಾನ್ಯಗಳನ್ನು ಎಸೆದು ಹರಕೆ ತೀರಿಸಿದರು. ರೈತರು ಮಹಾರಥಕ್ಕೆ ಎಸೆದ ಧಾನ್ಯಗಳನ್ನು ಸಂಗ್ರಹಿಸಿ ಮನೆಗೆ ಕೊಂಡೊಯ್ದರು. ಮುಂಗಾರು ಹಂಗಾಮಿನಲ್ಲಿ ಇವನ್ನೆಲ್ಲ ಜಮೀನಿನಲ್ಲಿ ಬಿತ್ತಿದರೆ ಸಮೃದ್ಧ ಬೆಳೆ ಬರಲಿದೆ ಎಂಬುದು ನಂಬಿಕೆ.