ಜಿಲ್ಲೆ

ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನ

ಸೌಮ್ಯ ಆರ್

ಕಡಬ: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಪನ್ನಗೊಂಡಿತು. ದೇವಸ್ಥಾನದ ಅರ್ಚಕ ವೆಂಕಟಕೃಷ್ಣ ಭಟ್ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ನವರಾತ್ರಿ ಪ್ರಯುಕ್ತ ಗಣಹೋಮ, ಆಯುಧ ಪೂಜೆ, ವಿಜಯದಶಮಿ ಅಕ್ಷರಾಭ್ಯಾಸ ನಡೆಯಿತು. ಪ್ರತಿದಿನ ರಾತ್ರಿ ವಿವಿಧ ಭಜನಾ ಮಂಡಳಿಗಳಿಂದ ವಿಶೇಷ ಭಜನಾ ಸೇವೆ ನಡೆಯಿತು.

ದೇವಸ್ಥಾನದ ಆಡಳಿತಾಧಿಕಾರಿ ರಘು ಎನ್.ಬಿ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೊರಗಪ್ಪ ಗೌಡ ಕುಕ್ಕುನಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ಜೋಡುದೈವಗಳ ಆಡಳಿತದಾರ ಕುಸುಮಾಧರ ರೈ ಕಾಸ್ಪಾಡಿಗುತ್ತು, ಬೈಲುವಾರು ಪಂಗಡದ ಅಧ್ಯಕ್ಷ ಕುಸುಮಾಧರ ಬೀರೊಳಿಗೆ, ಕಾರ್ಯದರ್ಶಿ ಯಕ್ಷಿತ್ ಮುದುವ ಮೊದಲಾದವರು ಉಪಸ್ಥಿತರಿದ್ದರು.