ಗೋಕಾಕ: ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ಶ್ರೀ ರಾಮೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಏ. 6ರಂದು ಸಂಜೆ 4 ಗಂಟೆಗೆ ಶ್ರೀ ರಾಮೋತ್ಸವದ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದುಪರ ಸಂಘಟನೆ ಮುಖಂಡ ಸದಾಶಿವ ಗುದಗಗೋಳ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಕೊಳವಿ ಹನುಮಂತ ದೇವರ ಗುಡಿಯಿಂದ ಶೋಭಾಯಾತ್ರೆ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಸಂಗೊಳ್ಳಿ ರಾಯಣ್ಣ ವತ್ತದಲ್ಲಿ ಮುಕ್ತಾಯವಾಗುವುದು. ನಂತರ ರಾಮೋತ್ಸವದ ಕಾರ್ಯಕ್ರಮ ಜರುಗುವುದು.
ಈ ಶೋಭಾಯಾತ್ರೆಯಲ್ಲಿ ತಾಲೂಕಿನ ಮಠಾಧೀಶರು ಹಾಗೂ ಹಿಂದುಪರ ಸಂಘಟನೆಗಳು ಭಾಗವಹಿಸಲಿವೆ. ಎಲ್ಲರೂ ಪಾಲ್ಗೊಳ್ಳಿ ಎಂದು ಕೋರಿದರು. ಮುಖಂಡರಾದ ನಾರಾಯಣ ಮಠಾಧಿಕಾರಿ, ಲಕ್ಷ್ಮಣ ಮೀಶಾಳೆ, ಪುರುಷೋತ್ತಮ ಒಡೆಯರ, ಆನಂದ ಪಾತಾಗಿರಿ ಇದ್ದರು.