ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ನೂತನ ಮಂದಿರ. 
ಜಿಲ್ಲೆ

20ರಿಂದ ಬಿಲ್ಲಿನಕೋಟೆಯಲ್ಲಿ ವಿಶೇಷ ಪೂಜೆ

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಹೋಬಳಿಯ ಬಿಲ್ಲಿನಕೋಟೆಯಲ್ಲಿ ಜ.20ರಿಂದ 22ರವರೆಗೂ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇವಾಲಯ ಟ್ರಸ್ಟ್‌ನಿಂದ ಜೀರ್ಣೋದ್ಧಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ಬಿ.ಎಂ.ಚಂದ್ರಶೇಖರ್ ತಿಳಿಸಿದರು.
ಶ್ರೀ ಮಹಾಗಣಪತಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ, ಶ್ರೀ ಗಂಗಮಾಳಮ್ಮ ದೇವಿಯ ನೂತನ ದೇವಾಲಯ ಹಾಗೂ ವಿಮಾನ ಗೋಪುರ ಕಲಶ ಪ್ರತಿಷ್ಠಾಪನಾ ಮಹಾಕುಂಭಾಭಿಷೇಕ ಮಹೋತ್ಸವದ ನಿಮಿತ್ತ ಜ.20ರಂದು ಶ್ರೀ ಮೈಲಾರಲಿಂಗೇಶ್ವರಸ್ವಾಮಿ ಮೂಲ ದೇವರಿಗೆ ಪೂಜೆ, ಮೆರವಣಿಗೆ, ಗ್ರಾಮದೇವತೆ ಜಲದರಮ್ಮ ಸನ್ನಿಧಾನದಿಂದ ಗಂಗಾಪೂಜೆ, ಗ್ರಾಮ ಪ್ರದಕ್ಷಿಣೆ ಸೇರಿ ವಿವಿಧ ಪೂಜಾ ಕಾರ್ಯ ಆಯೋಜಿಸಲಾಗಿದೆ.
ಜ.21ರಂದು ವೇದ ಪುರಾಯಣ, ಗಣಪತಿಪೂಜೆ, ಪುಣ್ಯಾಹ, ಪಂಚಗವ್ಯ, ರಕ್ಷಾಬಂಧನ, ಮಹಾಸಂಕಲ್ಪ, ನೂತನ ವಿಗ್ರಹ ಹಾಗೂ ವಿಮಾನ ಗೂಪುರದ ಕಳಸಕ್ಕೆ ಬಿಂಬಶುದ್ಧಿ ಹಾಗೂ ವಿಶೇಷ ಪೂಜೆಯೊಂದಿಗೆ ಹೋಮ ಹವನ ನೆರವೇರಲಿವೆ. 22ರಂದು ಸುಪ್ರಭಾತ ಸೇವೆ, ವೇದ ಪರಾಯಣ, ಮಹಾಗಣಪತಿ ಪೂಜೆ, ಸಂಕಲ್ಪ, ಪುಣ್ಯಾಹ ವಾಚನ, ವಿವಿಧ ಹೋಮ, ಮಹಾಪೂರ್ಣಹುತಿ, ಯಂತ್ರಾದಾನ, ಪೂರ್ವಕ, ಕಲಶ ವಿಸರ್ಜನೆ, ಬೆಳಗ್ಗೆ 11.55 ರಿಂದ 12.15 ರವರೆಗೆ ಶ್ರೀ ಮೈಲಾರಲಿಂಗೇಶ್ವರ ಪರಿವಾರ ದೇವರು ಹಾಗೂ ವಿಮಾನ ಗೋಪುರ ಮಹಾಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಮಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಗುರೂಜಿ ವೆಂಕಪ್ಪಯ್ಯ ಓಡೆಯರ್ ಸ್ವಾಮಿ, ಕನಕ ಗುರು ಪೀಠಧ ಶ್ರೀ ನಿರಂಜನಾದಿಪುರಿ ಸ್ವಾಮೀಜಿ, ಗದ್ದುಗೆ ಮಠದ ಶ್ರೀ ಮಹಂತ ಸ್ವಾಮೀಜಿ, ಶಿವಗಂಗೆಯ ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕಂಬಾಳು ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು ಎಂದು ತಿಳಿಸಿದ್ದಾರೆ.ಬಿಲ್ಲಿನಕೋಟೆ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ನೂತನ ಮಂದಿರ.