ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ಶ್ರೀಕೃಷ್ಣ ಜಯಂತಿ ಅಂಗವಾಗಿ ತಹಸೀಲ್ದಾರ್ ವಿ.ಕೆ.ನೇತ್ರಾವತಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಕಾಡು ಗೊಲ್ಲ ಸಮಾಜದ ಜಿಲ್ಲಾಧ್ಯಕ್ಷ ಸಣ್ಣ ಬಾಲಪ್ಪ, ಉಪಾಧ್ಯಕ್ಷ ಜಿ.ಆರ್.ಬಾಲಪ್ಪ, ಖಜಾಂಚಿ ಗೌಡ ಚಿತ್ತಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎನ್.ವಿರೂಪಾಕ್ಷಪ್ಪ, ತಾಲೂಕು ಉಪಾಧ್ಯಕ್ಷ ಕಾಡಪ್ಪ ಇತರರಿದ್ದರು. 
ಜಿಲ್ಲೆ

ಶ್ರೀ ಕೃಷ್ಣ್ಣ ಜಯಂತಿ ಆಚರಣೆಗೆ ಸಿದ್ಧತೆ ಕೈಗೊಳ್ಳಿ

ರುದ್ರಪ್ಪ ವಾಲಿ

ಕೂಡ್ಲಿಗಿ: ಶ್ರೀ ಕೃಷ್ಣ್ಣ ಜಯಂತಿ ಕಾರ್ಯಕ್ರಮವನ್ನು ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಸೂಚಿಸಿದರು.

ಸರ್ಕಾರಿ ನಿಯಮಗಳಂತೆ ಆ.16 ರಂದು ಜಯಂತಿಯನ್ನು ತಾಲೂಕು ಕಚೇರಿಯಲ್ಲಿ ಆಚರಿಸಲಾಗುವುದು. ತಾಲೂಕಿನ ಯಾದವ ಸಮಾಜ ಸೇರಿದಂತೆ ಎಲ್ಲ ಸಮುದಾಯದವರು ಭಾಗಿಯಾಗಿ ಯಶಸ್ವಿಗೊಳಿಸಬೇಕು. ಜಯಂತಿ ಅಂಗವಾಗಿ ತಾಲೂಕಿನ ಎಲ್ಲ ಶಾಲೆ, ಕಾಲೇಜುಗಳಲ್ಲಿ ಶ್ರೀಕೃಷ್ಣ ಭಾವಚಿತ್ರವನ್ನು ಇರಿಸಿ ಪೂಜೆ ಮಾಡುವುದರೊಂದಿಗೆ ಶ್ರೀ ಕೃಷ್ಣನ ಯಶೋಗಾಥೆಯನ್ನು ತಿಳಿಸಬೇಕು ಎಂದು ಬಿಇಒಗೆ ಸೂಚನೆ ನೀಡಿದರು.

ಕಾಡು ಗೊಲ್ಲ ಸಮಾಜದ ತಾಲೂಕು ಕಾರ್ಯದರ್ಶಿ ದೊಡ್ಡಪ್ಪ, ಪ್ರಮುಖರಾದ ರವಿ ಸಿದ್ದೇಶ, ಮೂಡ್ಲಪ್ಪ, ಗೋಪಾಲಪ್ಪ, ಸಿದ್ದಯ್ಯನಹಟ್ಟಿ ದೊಡ್ಡಪ್ಪ, ಜಿ. ಸಿದ್ದೇಶ, ಶ್ರೀನಿವಾಸ, ಸಣ್ಣ ಬಾಲಪ್ಪ, ವಸಂತಗೌಡ, ಮಧುಸೂದನ ಇತರರಿದ್ದರು.