ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ರಕೇಶ್ವರಿ ದೇವಿ ಸನ್ನಿಧಿ ಬ್ರಹ್ಮಕಲಶೋತ್ಸವ ಅಂಗವಾಗಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಬೆಳಗ್ಗೆ ವಿವಿಧ ಹೋಮಾದಿಗಳು, ವೈದಿಕ ವಿಧಿವಿಧಾನಗಳು, ಭಜನಾ ಸಂಕೀರ್ತನೆ, ವಿದುಷಿ ಡಾ.ಸುಚಿತ್ರಾ ಹೊಳ್ಳ ಮತ್ತು ಶಿಷ್ಯೆಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ ಪೂಜೆಯ ಬಳಿಕ ಅನ್ನಸಂತರ್ಪಣೆ ನೆರವೇರಿತು.
ಸಾಂಸ್ಕೃತಿಕ ವೇದಿಕೆಯಲ್ಲಿ ನರಸಿಂಹ ಮಯ್ಯ ಸಾರಥ್ಯದಲ್ಲಿ ಚಿಣ್ಣರಿಂದ ಯಕ್ಷಗಾನ ಪ್ರದರ್ಶನ, ಸಂಜೆ ಗುರುಪ್ರಿಯ ಕಾಮತ್ ಶಿಷ್ಯರಿಂದ ಭಕ್ತಿ- ಭಾವ- ಗೀತೆ ನಡೆಯಿತು. ಸಂಜೆ ಶ್ರೀ ರಕ್ತೇಶ್ವರಿ ದೇವಿ ಸಾನ್ನಿಧ್ಯದಲ್ಲಿ ಅಷ್ಟಾವಧನ ಸೇವೆಗಳು ಹಾಗೂ ನವವರಣ ಕೀರ್ತನೆಯೊಂದಿಗೆ ಶ್ರೀ ಚಕ್ರ ಪೂಜೆ ನೆರವೇರಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ, ಪ್ರಧಾನ ಕಾರ್ಯದರ್ಶಿ ಐತಪ್ಪ ಪೂಜಾರಿ, ಸೇವಾ ಸಮಿತಿ ಸದಸ್ಯರಾದ ಅಶ್ವನಿಕುಮಾರ್ ರೈ, ರಾಜೇಶ್ ಎಲ್.ನಾಯಕ್, ರಮೇಶ್ ಸಾಲಿಯಾನ್, ಸತೀಶ್ ಭಂಡಾರಿ ಕುಳತ್ತಬೆಟ್ಟು, ಸತೀಶ್ ಶೆಟ್ಟಿ ಮೊಡಂಕಾಪು ಮೊದಲಾದವರು ಉಪಸ್ಥಿತರಿದ್ದರು.
ಬಾಬಾ ವಿಠಲ್ ಗಿರಿ ಮಹಾರಾಜ್ ಭೇಟಿ
ಭಾನುವಾರ ಉತ್ತರಾಖಾಂಡ್ ಹರಿದ್ವಾರ್, ಮಾಯಾಪುರಿ ಪಂಚಾಯಿತಿ ಆಖಾಡ ಶ್ರೀ ನಿರಂಜಿನಿ ನಾಗಾಸಾಧು ತಪೋನಿಧಿ ಬಾಬಾ ವಿಠಲ್ ಗಿರಿ ಮಹಾರಾಜ್ ಭೇಟಿ ನೀಡಿದರು. ದೇವಳ ಸೇವಾ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ ಗುರುಕೃಪ, ಸೇವಾ ಸಮಿತಿ ಕೋಶಾಧಿಕಾರಿ ಬಿ.ಮೋಹನ್, ಪದಾಧಿಕಾರಿಗಳಾದ ರಾಜಾರಾಮ ನಾಯಕ್, ಪುಷ್ಪರಾಜ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಪ್ರಣಾಮ್ ಅಜ್ಜಿಬೆಟ್ಟು, ಜಯ ಮತ್ತಿತರರು ಉಪಸ್ಥಿತರಿದ್ದರು. ಶನಿವಾರ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಗುತ್ತಿಗೆದಾರ ಉದಯಕುಮಾರ್ ರಾವ್ ದಂಪತಿ ಬಂಟ್ವಾಳ, ಇಂಟಕ್ ಮುಖಂಡ ರಾಕೇಶ್ ಮಲ್ಲಿ ದೇವಳಕ್ಕೆ ಭೇಟಿ ನೀಡಿದ್ದರು.