ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಆ. 19ರಂದು ಬೆಳಗ್ಗೆ 6.30ಕ್ಕೆ ಅಂಬಿಕಾನಗರದಲ್ಲಿರುವ ಸಂಘದ ಕಟ್ಟಡದಲ್ಲಿ ಯಜ್ಞೋಪವೀತ ಧಾರಣೆಯ ಶ್ರಾವಣಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ವಿಪ್ರ ಬಾಂಧವರು ಭಾಗವಹಿಸಲು ಸಂಘದ ಅಧ್ಯಕ್ಷ ಸುನಿಲ ಗುಮಾಸ್ತೆ ಕೋರಿದ್ದಾರೆ.