ಚಿಕ್ಕಮಗಳೂರಿನ ಗೌರಿ ಕಾಲುವೆ ಬಡಾವಣೆಯ ಗೌರಿರಂಗಮAದಿರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನಡೆದ ಶ್ರಾವಣ ಸಂಭ್ರಮ ಕಾರ್ಯಕ್ರಮವನ್ನು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಉದ್ಘಾಟಿಸಿದರು. ನಾಗಶ್ರೀ ತ್ಯಾಗರಾಜ್, ಅರವಿಂದ ದೀಕ್ಷಿತ್, ಕುಮಾರಸ್ವಾಮಿ, ಶಾರದಮ್ಮ ಉಪಸ್ಥಿತರಿದ್ದರು. 
ಜಿಲ್ಲೆ

ಶ್ರಾವಣ ತೋರಣ ಬದುಕಿಗೆ ಹೂರಣ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಶ್ರಾವಣ ಮಾಸದಲ್ಲಿ ಕಟ್ಟಿದರೆ ತೋರಣ ಅದು ಬದುಕಿಗೆ ಹೂರಣವಾಗುತ್ತದೆ ಎಂದು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ತಿಳಿಸಿದರು.

ನಗರದ ಗೌರಿ ಕಾಲುವೆ ಬಡಾವಣೆಯ ಗೌರಿರಂಗಮAದಿರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನಡೆದ ಶ್ರಾವಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿಯ ಚಿಗುರಿನ ಸೌದಂರ್ಯ ಶ್ರಾವಣ ಮಾಸದ ಸೊಗಸು. ಇಡೀ ನಮ್ಮ ಭಾರತ ದೇಶದಲ್ಲಿ ಪ್ರಕೃತಿಯ ಉಪಾಸನೆಯೇ ಎಲ್ಲ ಹಬ್ಬಗಳ ಮೂಲದ್ರವ್ಯ. ಹಬ್ಬಗಳ ಮೂಲಕ ದೇವತಾ ಆರಾಧನೆ ನಮ್ಮ ಸಂಸ್ಕೃತಿಯಲ್ಲಿ ನಡೆದುಕೊಂಡು ಬಂದಿದೆ. ವಿವಿಧ ಪತ್ರೆ, ಪುಷ್ಪ, ಹಣ್ಣು ಇವೆಲ್ಲ ನಮ್ಮ ಹಬ್ಬಗಳಲ್ಲಿ ಕಾಲಕಾಲಕ್ಕೆ ಬಳಕೆಗೆ ಕಾರಣವಾಗುತ್ತದೆ ಎಂದರು.
ಶ್ರಾವಣದಲ್ಲಿ ಶ್ರವಣ ಪ್ರಧಾನ. ನಮ್ಮ ಮಕ್ಕಳಿಗೆ ಸದ್ವಿಚಾರಗಳನ್ನು ಪರಂಪರೆ, ಪದ್ಧತಿಗಳನ್ನು ಕಲಿಸಿ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಮನೆ ಒಗ್ಗೂಡಿದರೆ ಮನಸ್ಸುಗಳು ಒಗ್ಗೂಡುತ್ತವೆ. ದುಡಿದು ತಿನ್ನುವ ಸಂಸ್ಕೃತಿ ಒಳಿತು. ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಬೆಲೆಕೊಡಬೇಕು. ಕಾಯಾ, ವಾಚಾ, ಮನಸ್ಸಾ ಪರಿಶುದ್ಧತೆಗೆ ಶ್ರಾವಣಮಾಸ ಪ್ರೇರಕ. ಬೇರುಗಳನ್ನು ಗಟ್ಟಿಗೊಳಿಸುವ ಅವಕಾಶ ಶ್ರಾವಣದಲ್ಲಿದೆ. ಸಾಹಿತ್ಯಕ್ಕೆ ಸಂವೇದನಾಶಕ್ತಿ ಇದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಮಹಿಳಾ ಘಟಕದ ಜಿಲ್ಲಾ ಪ್ರಮುಖ್ ನಾಗಶ್ರೀ ತ್ಯಾಗರಾಜ್ ಮಾತನಾಡಿ, ಶ್ರಾವಣ ಬಂದರೆ ಪ್ರಕೃತಿಯೇ ನಲಿಯುತ್ತದೆ. ಹಬ್ಬಗಳ ಮೆರವಣಿಗೆ ಆರಂಭವಾಗುತ್ತದೆ. ಶ್ರಾವಣ ಭಕ್ಷö್ಯಭೋಜನಕ್ಕೂ ಹೆಸರು ವಾಸಿ. ಪೂಜೆ, ಪಾರಾಯಣ ಮನೆ, ಮಠ, ಮಂದಿರಗಳಲ್ಲಿ ತಿಂಗಳಪೂರ್ತಿ ನಡೆಯುತ್ತವೆ. ಭಾರತೀಯ ಸಾಹಿತ್ಯ ಧರ್ಮ ಪರಂಪರೆಯಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಪ್ರಾಧ್ಯಾನ್ಯತೆ ನೀಡಲಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಅಭಾಸಾಪ ಜಿಲ್ಲಾಧ್ಯಕ್ಷ ಅರವಿಂದ ದೀಕ್ಷಿತ್ ಮಾತನಾಡಿ, ಶ್ರಾವಣ ಮಾಸದ ಸೊಗಸು ಬಲುಸುಂದರ. ಒಳ್ಳೆಯನ್ನು ಹೇಳುವುದು ಮತ್ತು ಕೇಳುವುದು ಶ್ರಾವಣದ ಸಂದೇಶ. ಭಕ್ತಿ ಉಕ್ಕಬೇಕು, ಭಾವ ಉಗ್ಗಬೇಕು. ನಗು ಸಹಜ ಧರ್ಮವಾಗಬೇಕು. ಮಲ್ಲಿಗೆಯ ಮೃದು ಅನ್ನ, ಘಮಘಮಿಸುವ ತುಪ್ಪ, ಮಿಡಿಉಪ್ಪಿನಕಾಯಿ, ತಿಳಿಸಾರು, ಕೆನೆಮೊಸರು, ಹಲಸಿನಹಪ್ಪಳ, ಬಡಿಸುವವಳ ಬಳೆಗಳ ಸದ್ದು, ಇನಿದನಿ, ಹೊರಗೆ ಶ್ರಾವಣದ ಮಳೆಹನಿ ಇದೇ ನಿಜವಾದ ಸ್ವರ್ಗ ಎಂದು ಬಣ್ಣಿಸಿದರು.
ಪರಿಷತ್ ತಾಲೂಕು ಉಪಾಧ್ಯಕ್ಷ ಕುಮಾರಸ್ವಾಮಿ, ಗೌರಿಮಹಿಳಾ ಮಂಡಳಿ ಮುಖ್ಯಸ್ಥೆ ಶಾರದಮ್ಮ ಉಪಸ್ಥಿತರಿದ್ದರು.