ಬೈಂದೂರು: ಮೋಗೇರಿ ಪಂಚಾಗಕ್ಕೆ ಶತಮಾನಗಳ ಇತಿಹಾಸವಿದ್ದು, ಪೂರ್ವಿಕರ ಶ್ರಮದಿಂದ ತಂತ್ರಜ್ಞ್ಞಾನ ಅಳವಡಿಸಿಕೊಂಡು ತನ್ನ ವ್ಯಾಪ್ತಿ ಬಹಳ ವಿಸ್ತರಿಸುವುದರ ಜತೆ ಪಂಚಾಂಗ ಕ್ಷೇತ್ರದಲ್ಲಿ ಗಟ್ಟಿನೆಲೆ ಹೊಂದಿರುತ್ತದೆ. ಫೌಂಡೇಶನ ದಶಮಾನೋತ್ಸವ ಕಾರ್ಯಕ್ರಮ ಬ್ರಾಹ್ಮಣ ಪರಿಷತ್ ಜತೆಯಲ್ಲಿ ಶ್ರಾವಣ ಸಂಧ್ಯಾ ಕಾರ್ಯಕ್ರಮ ನಡೆಸಿ ಮಾದರಿಯಾಗುವ ರೀತಿಯಲ್ಲಿ ಮಾಡಿದ್ದಾರೆ ಎಂದು ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು.
ಕೆರ್ಗಾಲ್ ಮಟ್ನಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯ, ಸೂರ್ಯ ಸಿದ್ಧಾಂತ ಫೌಂಡೇಶನ್ ಮೋಗೇರಿ ಆಶ್ರಯದಲ್ಲಿ ಭಾನುವಾರ ಶ್ರಾವಣ ಸಂಧ್ಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಾಹ್ಮಣ ಪರಿಷತ್ ಅಧ್ಯಕ್ಷ ಯು.ಸಂದೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ವಾಸುದೇವ ಐತಾಳ್, ಸಾಹಿತಿ ವರಮಹಾಲಕ್ಷ್ಮೀ ಹೊಳ್ಳ, ಗೌರವಾಧ್ಯಕ್ಷ ಅರುಣ್ ಶ್ಯಾನುಭಾಗ್, ಅನುಪಮಾ ಜನಾದರ್ನ ಅಡಿಗ, ಮಹಿಳಾ ವೇದಿಕೆ ಅಧ್ಯಕ್ಷೆ ವೀಣಾ ಹೆಬ್ಬಾರ್, ಯುವವೇದಿಕೆ ಅಧ್ಯಕ್ಷ ಪದ್ಮನಾಭ ಹೆಬ್ಬಾರ್, ನಿವೃತ್ತ ಶಿಕ್ಷಕ ಮಹಾಬಲೇಶ್ವರ ಐತಾಳ ಇದ್ದರು. ಶ್ರಾವಣ ಸಂಧ್ಯಾ ಕಾರ್ಯಕ್ರಮದಲ್ಲಿ ಮಹಿಳೆಯರಿಂದ ವಿಷ್ಣು ಸಹಸ್ರ ನಾಮ ಪಠಣ, ಲಲಿತಾ ಸಹಸ್ರನಾಮ ಪಠಣ ನಡೆಯಿತು. ರಕ್ಷಾಬಂಧನ ಕಾರ್ಯಕ್ರಮ ಜರುಗಿತು. ಮಹಿಳಾ ವೇದಿಕೆ ಮಾಜಿ ಅಧ್ಯಕ್ಷೆ ಹೇಮಾ ಹೊಳ್ಳ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಪ್ರಾಯೋಜಕ ಜನಾರ್ದನ ಅಡಿಗ ಸ್ವಾಗತಿಸಿದರು. ವಿದ್ಯಾ ಅಡಿಗ, ಜಗದೀಶ ರಾವ್, ಪ್ರಶಾಂತ ಮಯ್ಯ ಸಹಕರಿಸಿದರು. ಚೈತ್ರಾ ವೈದ್ಯ ನಿರೂಪಿಸಿದರು.