ಜಿಲ್ಲೆ

ಶ್ರಾವಣ ಪುರಾಣ

ಹುಬ್ಬಳ್ಳಿ: ಇಲ್ಲಿಯ ಆನಂದನಗರ ಮಯೂರ ನಗರದಲ್ಲಿರುವ ಶ್ರೀ ಪವಾಡ ಬಸವೇಶ್ವರ ಹಾಗೂ ಗುಡ್ಡಾಪುರ ದಾನಮ್ಮದೇವಿ ಧಾರ್ಮಿಕ ಸೇವಾ ಸಂಸ್ಥೆ ವತಿಯಿಂದ ಶ್ರಾವಣ ಮಾಸದ ನಿಮಿತ್ತ 24ನೇ ವರ್ಷದ ಪುರಾಣ ಕಾರ್ಯಕ್ರಮ ಆ. 5ರಿಂದ ಏರ್ಪಡಿಸಲಾಗಿದೆ.

ಸದ್ಗುರು ಸಿದ್ಧಾರೂಢರ ಪುರಾಣವು ಒಂದು ತಿಂಗಳ ಪರ್ಯಂತ ನಿತ್ಯ ಸಂಜೆ 7ಕ್ಕೆ ಜರುಗಲಿದೆ. ಆ. 8ರಂದು ಶ್ರೀ ದಾನಮ್ಮದೇವಿಯ ತೊಟ್ಟಿಲೋತ್ಸವ, 22ರಂದು ದಾನಮ್ಮದೇವಿ ವಿವಾಹ ಮಹೋತ್ಸವ, ಕಂಕಣ ಕಟ್ಟುವ ಕಾರ್ಯಕ್ರಮ ನಡೆಯಲಿದೆ. ರಾಜವಿದ್ಯಾಶ್ರಮದ ಶ್ರೀ ಷಡಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.