ಕಡೂರು: ಪಟ್ಟಣದ ಶ್ರೀ ಶನೈಶ್ಚರಸ್ವಾಮಿ ದೇವಾಲಯದಲ್ಲಿ ಶ್ರಾವಣ ನಾಲ್ಕನೇ ಶನಿವಾರದ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ಜರುಗಿದವು..ಬೆಳಗ್ಗೆ ಪಂಚಾಮೃತ ಅಭಿಷೇಕ, ತೈಲಾಭಿಷೇಕ ಹಾಗೂ ಸಂಕಲ್ಪ ಸೇವೆಗಳು ಪ್ರಧಾನ ಅರ್ಚಕ ಪುನೀತ್ ಕಶ್ಯಪ್ ನೇತೃತ್ವದಲ್ಲಿ ಜರುಗಿದವು. ದೇವಾಲಯ ಸಮಿತಿ ಪದಾಧಿಕಾರಿಗಳು ಇದ್ದರು.