ಜಿಲ್ಲೆ

17ಕ್ಕೆ ಶ್ರಾವಣ ಸಂಗೀತ ಸಂಭ್ರಮ

ಹುಬ್ಬಳ್ಳಿ : ಇಲ್ಲಿನ ಇಲ್ಲಿಯ ಹೊಸೂರಿನಲ್ಲಿರುವ ಕನ್ನಡ ವೖಶ್ಯ ಸಭಾಭವನದಲ್ಲಿ ಆ. 17 ಸಂಜೆ 5 ಗಂಟೆಯಿಂದ ಶ್ರಾವಣ ಸಂಗೀತ ಸಂಭ್ರಮ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಎದೆ ತುಂಬಿ ಹಾಡುವೆನು ಖ್ಯಾತಿಯ ಅಂಕೋಲಾ ಸಹೋದರಿಯರಾದ ದರ್ಶಿನಿ ಶೆಟ್ಟಿ ಮತ್ತು ವರ್ಷಿಣಿ ಶೆಟ್ಟಿ ಅವರು ಈ ಕಾರ್ಯಕ್ರಮದಲ್ಲಿ ಗಾನಸುಧೆಯನ್ನು ಹರಿಸಲಿದ್ದಾರೆ.

ಅಂಕೋಲಾದ ಸಂಗಮ ಸೇವಾ ಸಂಸ್ಥೆ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಆಧ್ಯಾತ್ಮ ಚಿಂತಕರಾದ ಡಾ. ಎ ಸಿ. ವಾಲಿ ಮಹಾರಾಜ್ ಉದ್ಘಾಟಿಸುವರು. ಕನ್ನಡ ವೈಶ್ಯವಿದ್ಯಾನಿಧಿಯ ಮಾಜಿ ಅಧ್ಯಕ್ಷ ಗೋವಿಂದ ಗಣಪಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ವಿಠಲದಾಸ್ ಕಾಮತ್ ಅತಿಥಿಯಾಗಿದ್ದು, ಉತ್ತರ ಕನ್ನಡ ಜಿಲ್ಲಾ ವೈಶ್ಯ ಸಮಾಜದ ಅಧ್ಯಕ್ಷ ಸತೀಶ ಕಲ್ಮನೆ ಹಾಗೂ ಅಂಕೋಲಾದ ಕಲಾಭಾರತಿ ಟ್ರಸ್ಟ್ ಅಧ್ಯಕ್ಷ ಪ್ರಶಾಂತ ಶೆಟ್ಟಿ ಅವರು ಉಪಸ್ಥಿತರಿರುವರು. ಸಂಗೀತಾಭಿಮಾನಿಗಳು ಪಾಲ್ಗೊಳ್ಳುವಂತೆ ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಎನ್. ಶೆಟ್ಟಿ ಕೋರಿದ್ದಾರೆ.