ಜಿಲ್ಲೆ

ಮಗ್ಗುಲ ದೇವಾಲಯದಲ್ಲಿ ಶ್ರಾವಣ ಮಾಸ ಪೂಜಾ ಕಾರ್ಯಕ್ರಮ

ಎಂ.ರವಿ

ವಿರಾಜಪೇಟೆ: ಆಷಾಢ ಮಾಸದ ನಂತರದಲ್ಲಿ ಒಂದು ತಿಂಗಳವರೆಗೆ ಶ್ರೀಶನಿದೇವರ ಆರಾಧನೆ ನಡೆಯುತ್ತದೆ. ಈ ನಿಟ್ಟಿನಲ್ಲಿ ವಿರಾಜಪೇಟೆ ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೈಶ್ಚರ ದೇವಾಲಯದಲ್ಲಿ ಶ್ರಾವಣ ಮಾಸದ ಪೂಜೆಗಳು ಆ.8ರಿಂದ ಆರಂಭವಾಗಲಿವೆ.

ವಿರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದ ಶ್ರೀ ಶನೈಶ್ಚರ ಮತ್ತು ನವಗ್ರಹ ದೇವಾಲಯದಲ್ಲಿ ಆ.10 ರಿಂದ ಶ್ರಾವಣ ಮಾಸದ ಪೂಜೆಗಳು ನಡೆಯಲಿವೆ. ಆ.10ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಗಣಪತಿ ಹೋಮದೊಂದಿಗೆ ಪೂಜಾ ಕಾರ್ಯಕ್ರಮಗಳು ಆರಂಭಗೊಂಡು ವಿಶೇಷ ಪೂಜಾ ಕಾರ್ಯ, ಮಹಾ ಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಆ.17, 24, ಮತ್ತು 31ರ ನಾಲ್ಕು ಶನಿವಾರದಂದು ಶ್ರಾವಣ ಮಾಸ ಪೂಜೆಗಳು ನಡೆಯಲಿವೆ. ಶ್ರಾವಣ ಮಾಸದ ವಿಶೇಷ ದಿನಗಳಲ್ಲಿ ನವಗ್ರಹ ಪೂಜೆ, ಶನಿಶಾಂತಿ ಪೂಜೆ, ಶನಿ ಜಪ-ತಪ ಮುಂತಾದ ಪೂಜೆಗಳು ಆಲಯದಲ್ಲಿ ನಡೆಯಲಿವೆ. ಶನಿವಾರಗಳಂದು ಮಧ್ಯಾಹ್ನ 1 ಗಂಟೆಗೆ ನಾಡಿನ ಸುಭಿಕ್ಷೆಗಾಗಿ ಶ್ರೀ ಸ್ವಾಮಿಗೆ ವಿಶೇಷ ಮಾಹಾ ಪೂಜೆ ನಡೆಸಲಾಗುತ್ತದೆ. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.

ನಾಲ್ಕು ವಾರ ಶ್ರೀ ಸ್ವಾಮಿಗೆ ಸಲ್ಲುವ ಶ್ರಾವಣ ಮಾಸ ವಿಶೇಷ ಪೂಜೆಗಳಲ್ಲಿ ನಾಡಿನ ಸಮಸ್ತ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಅನುಗ್ರಹ ಪಡೆದುಕೊಳ್ಳುವಂತೆ ದೇಗುಲದ ಆಡಳಿತ ಮಂಡಳಿಯು ಮನವಿ ಮಾಡಿದೆ. ಪೂಜಾ ವಿವರಗಳಿಗಾಗಿ ಅರ್ಚಕರು ಮೊ: 9449359210 ಮತ್ತು ಅಧ್ಯಕ್ಷರು ಮೊ: 9449504902 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.