ಮೊಳಕಾಲ್ಮೂರು: ಮನೆ, ದೇವಸ್ಥಾನ, ಧಾರ್ಮಿಕ ಸ್ಥಳಗಳಲ್ಲಿ ಶ್ರಾವಣ ಮಾಸದ ವೃತಾಚಾರಣೆ, ಪೂಜಾ ಕಾರ್ಯಗಳು ಸಾಮಾನ್ಯ. ಆದರೆ, ವಸತಿ ನಿಲಯದಲ್ಲಿ 6 ವರ್ಷಗಳಿಂದ ಶ್ರಾವಣ ಮಾಸ ಪೂಜಾ ಕಾರ್ಯಗಳು ನಡೆಯುತ್ತಿರುವುದು ವಿಶೇಷ.
ಮೊಳಕಾಲ್ಮೂರಿನ ರಾಷ್ಟ್ರೀಯ ಮಾಧ್ಯಮಿಕ ಮೆಟ್ರಿಕ್ ಪೂರ್ವ ಹಾಗೂ ನಂತರದ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರು, ಸಿಬ್ಬಂದಿ ಜತೆಗೂಡಿ ಶ್ರಾವಣ ಮಾಸ ಕಡೇ ಶನಿವಾರವನ್ನು ಸಂಭ್ರಮದಿಂದ ಆಚರಿಸಿದರು.
ಸಮೀಪದ ಮಾರಮ್ಮ ಗುಡಿಗೆ ತೆರಳಿ, ಹುತ್ತಕ್ಕೆ ಹೂವು, ಬಿಲ್ವಪತ್ರೆ ಅರ್ಪಿಸಿ ವಿಶೇಷ ಪೂಜೆ ನೆರವೇರಿಸಿ, ಭಕ್ತ ಸಮರ್ಪಿಸಿದರು.
ಸಿಬ್ಬಂದಿ ಮಂಜುಳಾ, ಭಾಗ್ಯಮ್ಮ ಮಾತನಾಡಿ, ಕುಟುಂಬ ತೊರೆದು ವಿದ್ಯಾಭ್ಯಾಸಕ್ಕೆ ಆಗಮಿಸಿದ ವಿದ್ಯಾರ್ಥಿನಿಯರು ಹಬ್ಬಕ್ಕಾಗಿ ರಜೆ ಹಾಕಿ ಊರಿಗೆ ಹೋಗದಿರಲಿ ಎಂಬ ಉದ್ದೇಶದಿಂದ ಎಲ್ಲರೂ ಒಗ್ಗೂಡಿ ಶ್ರಾವಣ ಮಾಸ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಾದ ಬಿ.ಕೀರ್ತಿ, ಶಾಂತಮ್ಮ, ರೋಜಾ, ಭೂಮಿಕಾ, ಭದ್ರಮ್ಮ ಮಾತನಾಡಿ, ನಾವುಗಳು ಊರು, ಕುಟುಂಬ ತೊರೆದು ಹೊಸ ಜಾಗಕ್ಕೆ ಬಂದಿರುತ್ತೇವೆ. ಆದರೆ, ಇಲ್ಲಿನ ವಾತಾವರಣ ನಮ್ಮ ಕುಟುಂಬದ ರೀತಿಯೇ ಇದೆ. ಇಲ್ಲಿಯೇ ಹಬ್ಬ ಆಚರಿಸಿ, ಓದಿನ ಕಡೆ ಹೆಚ್ಚು ಗಮನ ಹರಿಸುತ್ತೇವೆ ಎಂದು ಹೇಳಿದರು.