ಹುಬ್ಬಳ್ಳಿ: ಇಲ್ಲಿಯ ಕಲ್ಯಾಣನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಸೆ. 13ರಂದು ಸಂಜೆ 6.45ಕ್ಕೆ ಸಂಸತಿ ಪರಂಪರೆ ಪರಿಚಯಿಸುವ ಜಾನಪದ ಶ್ರಾವಣ ಆಯೋಜಿಸಲಾಗಿದೆ.
ಹಳ್ಳಿಯ ಸೊಗಡು, ಹಬ್ಬ-ಹರಿ ದಿನಗಳ ಆಚರಣೆಯ ಮಹತ್ವವನ್ನು ಜಾನಪದ ಗೀತೆಗಳ ಮೂಲಕ ಪರಿಚಯಿಸುವ ಈ ವಿಶಿಷ್ಟ ಕಾರ್ಯಕ್ರಮವನ್ನು ರಂಗ ನಿರ್ದೇಶಕ ಗದಿಗಯ್ಯ ಹಿರೇಮಠ ಉದ್ಘಾಟಿಸುವರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ. ರಾಮು ಮೂಲಗಿ ಕಾರ್ಯಕ್ರಮ ನಡೆಸಿಕೊಡುವರು. ಡಾ. ನಾಗಲಿಂಗ ಮುರಗಿ ತಬಲಾ, ಶಿವಸ್ವಾಮಿ ಹಿರೇಮಠ ಹಾಮೋರ್ನಿಯಂ ಸಾಥ್ ನೀಡುವರು ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದರು ತಿಳಿಸಿದ್ದಾರೆ.