ಜಿಲ್ಲೆ

ಗ್ರೀನ್ ಸಿಟಿ ಫೋರಂನಿಂದ ಶ್ರಮದಾನ

reportermys

ಮಡಿಕೇರಿ: ಕಾವೇರಿ ತುಲಾ ಸಂಕ್ರಮಣದ ಪ್ರಯುಕ್ತ ಗ್ರೀನ್ ಸಿಟಿ ಫೋರಂ ವತಿಯಿಂದ ಸುಮಾರು ೯ ವರ್ಷಗಳಿಂದ ವರ್ಷ ಪ್ರತಿ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮದಂತೆ ಭಾಗಮಂಡಲದಲ್ಲಿ ಶ್ರಮದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.


ಭಾಗಮಂಡಲ ಮಡಿಕೇರಿ ರಸ್ತೆ ಯ ಸುಮಾರು ೪ ಕಿ.ಮೀ ಗಳಿಂದ ಗ್ರಾಮದ ಸರಹದ್ದು ಮಾರುಕಟ್ಟೆಯ ವರೆಗೆ ರಸ್ತೆ ಬದಿಯನ್ನು ಸ್ವಚ್ಛಗೊಳಿಸಲಾಯಿತು. ಮಡಿಕೇರಿ ಸರ್ಕಾರಿ ಪ್ರಥಮ ದರ್ಚೆ ಕಾಲೇಜಿನ ಸುಮಾರು ೫೦ ವಿದ್ಯಾರ್ಥಿಗಳು ಈ ಶ್ರಮದಾನದಲ್ಲಿ ಪಾಲ್ಗೊಂಡಿದ್ದು,ಶುಚಿತ್ವದೊಂದಿಗೆ ಬಾಗಮಂಡಲ ಆಸುಪಾಸಿನ ಅಂಗಡಿ ಮುಂಗಟ್ಟು ಗಳ ಮಾಲೀಕರಿಗೆ ತ್ಯಾಜ್ಯ ವಿಲೇವಾರಿಯ ಕುರಿತು ಅರಿವು ಮೂಡಿಸಿದರು.


ಭಾಗಮಂಡಲ ಪಂಚಾಯಿತಿಯ ಉಪದ್ಯಕ್ಷ ಸತೀಶ್ ಕುಮಾರ್‌ರವರು ವಿದ್ಯಾರ್ಥಿಗಳಿಗೆ ಸ್ವಚ್ಚತೆಯ ಬಗ್ಗೆ ಮಾಹಿತಿ ನೀಡಿದರು. ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಚೆಯ್ಯಂಡ ಸತ್ಯರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫೋರಂನ ಸ್ವಯಂ ಸೇವಕರು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ಎವರೆಸ್ಟ್ ರೊಡ್ರಿಗಸ್ ಪಾಲ್ಗೊಂಡಿದ್ದರು.