ಕ್ರೈಸ್ತ ಸಮುದಾಯ ಭವನದ ಪರಿಸರವನ್ನು ಮೇರಿ ಮಾತೆಯ ಯುವಕ ಸಂಘ ಮತ್ತು ಪಾಲನಾ ಸಮಿತಿ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.  
ಜಿಲ್ಲೆ

ಕ್ರೈಸ್ತ ಸಮುದಾಯ ಭವನ ಆವರಣದಲ್ಲಿ ಶ್ರಮದಾನ

ನಾಪೋಕ್ಲು: ಮೇರಿ ಮಾತೆಯ ಯುವಕ ಸಂಘ ಮತ್ತು ಪಾಲನಾ ಸಮಿತಿ ಸದಸ್ಯರು ಸ್ಥಳೀಯ ಕ್ರೈಸ್ತ ಸಮುದಾಯ ಭವನ ಆವರಣದಲ್ಲಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಹೊದ್ದೂರು ಗ್ರಾಮ ಪಂಚಾಯಿತಿಯ ಬೊಳಿಬಾಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕ್ರೈಸ್ತ ಸಮುದಾಯ ಭವನದ ಸುತ್ತಮುತ್ತ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಯುವಕ ಸಂಘ ಮತ್ತು ಪಾಲನಾ ಸಮಿತಿ ಸದಸ್ಯರು ಇತ್ತೀಚೆಗೆ ಒಂದು ದಿನ ಶ್ರಮದಾನ ಮಾಡುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣ ಮಾಡಿದರು.

ಧರ್ಮ ಗುರುಗಳಾದ ಜ್ಞಾನಪ್ರಕಾಶ್, ಮೇರಿ ಮಾತೆಯ ಯುವಕ ಸಂಘದ ಅಧ್ಯಕ್ಷರಾದ ಸ್ಟೀಫನ್, ಉಪಾಧ್ಯಕ್ಷ ರಾಯ್, ಖಜಾಂಚಿ ಸಿರಿಯಾಕ್ ಜೋಶಿ, ಪಾಲನಾ ಸಮಿತಿ ಸದಸ್ಯರಾದ ಡೈಸನ್, ರೋನಿ, ಜಾಯ್, ಜಾರ್ಜ್ ಪೌಲಿನ್, ಡೆರಿನಾ ಲೂವಿಸ್ ಇತರರಿದ್ದರು.