ಜಿಲ್ಲೆ

ವಿವಿಧೆಡೆ ತುಂತುರು ಮಳೆ

ಆದರ್ಶ್. ಎಂ.ಕೆ.

ಮಡಿಕೇರಿ: ಜಿಲ್ಲೆಯಲ್ಲಿ ಮಳೆ ಕ್ಷೀಣಿಸಿದ್ದು, ಭಾನುವಾರ ವಿವಿಧೆಡೆ ತುಂತುರು ಮಳೆಯಾಗಿದೆ.


ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಸಂಪೂರ್ಣವಾಗಿ ಇಳಿಮುಖ ಕಂಡಿದೆ. ಮಡಿಕೇರಿ ಸೇರಿದಂತೆ ಮಡಿಕೇರಿ ತಾಲೂಕಿನ ಗಾಳಿಬೀಡು, ಉಡೋತ್‌ಮೊಟ್ಟೆ, ತಾಳತ್ತಮನೆ, ಬೆಟ್ಟಗೇರಿ, ಬೋಯಿಕೇರಿ, ಮದೆನಾಡು, ಸಂಪಾಜೆ ಹಾಗೂ ಮಡಿಕೇರಿ ನಗರದ ಸುತ್ತಮುತ್ತ ತುಂತುರು ಮಳೆಯಾಗಿದೆ.


ಕಳೆದ ೨೪ಗಂಟೆಯಲ್ಲಿ ೫.೩೨ ಮಿ.ಮೀ. ಮಳೆ: ಭಾನುವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೫.೩೨ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೪.೯೨ ಮಿ.ಮೀ, ವಿರಾಜಪೇಟೆ ೦.೨ ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ ೧.೭೭ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ೧೪.೮೫ ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ೪.೯ ಮಿ.ಮೀ. ಮಳೆಯಾಗಿದೆ.


ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೮.೮, ನಾಪೋಕ್ಲು ೨, ಸಂಪಾಜೆ ೩.೫ ಭಾಗಮಂಡಲ ೫.೪, ವಿರಾಜಪೇಟೆ ಕಸಬಾ ೦.೪, ಹುದಿಕೇರಿ ೫.೧, ಬಾಳೆಲೆ ೨, ಸೋಮವಾರಪೇಟೆ ಕಸಬಾ ೬.೨, ಶನಿವಾರಸಂತೆ ೩೨, ಶಾಂತಳ್ಳಿ ೧೫, ಕೊಡ್ಲಿಪೇಟೆ ೬.೨, ಕುಶಾಲನಗರ ೧.೮, ಸುಂಟಿಕೊಪ್ಪ ೮ ಮಿ.ಮೀ.ಮಳೆಯಾಗಿದೆ.