ಜಿಲ್ಲೆ

ನ.22ರಿಂದ 26ರವರೆಗೆ ಮಂಡ್ಯ ಜಿಲ್ಲೆಯಲ್ಲಿ ತುಂತುರು ಮಳೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯಲ್ಲಿ ನ.22ರಿಂದ 26ರವರೆಗೆ ಮೋಡ ಕವಿದ ವಾತಾವರಣದ ಜತೆಗೆ ತುಂತುರು ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

22ರಂದು 1 ಮಿ.ಮೀ, 23ರಂದು 4, 24ರಂದು 4, 25ರಂದು 4 ಹಾಗೂ 26ರಂದು 3 ಮಿ.ಮೀ ಮಳೆಯಾಗಬಹುದು. ಈ ಅವಧಿಯಲ್ಲಿ ಗರಿಷ್ಟ 30 ಡಿಗ್ರಿ ಹಾಗೂ ಕನಿಷ್ಟ 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಗಾಳಿಯು ಪ್ರತಿ ಗಂಟೆಗೆ 7 ರಿಂದ 10 ಕಿ.ಮೀ ವೇಗದಲ್ಲಿ ಬೀಸಬಹುದೆಂದು ಮಾಹಿತಿ ನೀಡಿದೆ.