ಜಿಲ್ಲೆ

ಶೋಕಾಸ್ ನೋಟಿಸ್ ಹಿಂಪಡೆಯಲು ಆಗ್ರಹ

ಸೌಮ್ಯ ಆರ್

ಕಡಬ: ಸಮುದಾಯಕ್ಕಾದ ಅನ್ಯಾಯವನ್ನು ಪ್ರಶ್ನಿಸಿ ಪಕ್ಷದ ಹುದ್ದೆಗೆ ನೀಡಿದ ರಾಜೀನಾಮೆಗೆ ಪಕ್ಷದಿಂದ ನೀಡಲಾದ ಶೋಕಾಸ್ ನೋಟಿಸ್ ಹಿಂಪಡೆಯಬೇಕೆಂದು ಕಡಬ ಅಲ್ಪಸಂಖ್ಯಾತ ಮುಖಂಡ ಅಶ್ರಫ್ ಶೇಡಿಗುಂಡಿ ಆಗ್ರಹಿಸಿದ್ದಾರೆ.

ಅವಾಯಕ ಯುವಕನ ಕಗ್ಗೊಲೆ ಬಗ್ಗೆ ನ್ಯಾಯ ಕೇಳಲು ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಮತ್ತು ಉಪಾಧ್ಯಕ್ಷ ಕೆ.ಅಶ್ರಫ್ ನೇತೃತ್ವದಲ್ಲಿ ಪಕ್ಷದ ಅಲ್ಪಸಂಖ್ಯಾತ ಮುಖಂಡರು ಸಭೆ ಕರೆದಿದ್ದರು. ಇದ್ಯಾವುದೂ ಪಕ್ಷದ ಮೇಲಿನ ದ್ವೇಷದಿಂದಲ್ಲ. ಬದಲಾಗಿ ಪಕ್ಷದ ಅಸ್ತಿತ್ವ ಉಳಿಸಲು ಸರ್ಕಾರವನ್ನು ಎಚ್ಚರಿಸಲು ಹಾಗೂ ತಮ್ಮ ನೋವನ್ನು ತೋರಿಸಲು ಸಾಮೂಹಿಕ ರಾಜೀನಾಮೆ ಅನಿವಾರ್ಯವಾಗಿತ್ತು. ಆದರೆ ಅಂತಹ ನಾಯಕರಿಗೆ ಪಕ್ಷದ ವತಿಯಿಂದ ಶೋಕಾಸ್ ನೋಟಿಸ್ ಜಾರಿ ವಾಡಿ ಶಿಸ್ತು ಕ್ರಮದ ಎಚ್ಚರಿಕೆ ಸರಿಯಲ್ಲ. ತಕ್ಷಣ ಶೋಕಾಸ್ ನೋಟಿಸ್ ಹಿಂಪಡೆದು ನ್ಯಾಯ ಒದಗಿಸಬೇಕಾಗಿ ಕಡಬ ಬ್ಲಾಕ್ ಅಲ್ಪಸಂಖ್ಯಾತ ಮುಖಂಡರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪಿ.ಪಿ.ವರ್ಗೀಸ್, ಮಹಮ್ಮದ್ ಫೈಝಲ್, ಕೆ.ಎಂ.ಹನೀಫ್, ಎ.ಎಸ್.ಶರೀಫ್ ಇದ್ದರು.