ಜಿಲ್ಲೆ

ಜೀವಂತ ಇರುವ ಏಕೈಕ ನಾಗರಿಕತೆ ಸಿಂಧು, ಆರ್ ಎಸ್ ಎಸ್ ಕಾರ್ಯಕಾರಿಣಿ ಸದಸ್ಯ ರವೀಂದ್ರ ಪ್ರತಿಪಾದನೆ

Dharwada - Basavaraj Idli

ಹುಬ್ಬಳ್ಳಿ: ಜಗತ್ತಿನ ಯಾವುದೇ ನಾಗರಿಕತೆಯನ್ನು ನೋಡಿದರೂ ಹಿಂದೆ ಇತ್ತು ಈಗ ಇಲ್ಲ ಎಂಬ ಉತ್ತರವೇ ಬರುತ್ತದೆ. ಆದರೆ, ಸಿಂಧು ನಾಗರಿಕತೆ ಹಾಗಲ್ಲ. ಈಗಲೂ ಜೀವಂತ ಇದೆ. ವಿಶ್ವದ ಯಾವುದೇ ಶಕ್ತಿಗಳಿಗೆ ಹಿಂದುಗಳ ಶೌರ್ಯವನ್ನು ತಡೆಯಲು ಆಗಲಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಅವರು ಹೇಳಿದರು.

ಇಲ್ಲಿಯ ಸವಾಯಿ ಗಂಧರ್ವ ಹಾಲ್ನಲ್ಲಿ ಶನಿವಾರ ವಿಶ್ವ ಹಿಂದು ಪರಿಷತ್, ಬಜರಂಗ ದಳ ಧಾರವಾಡ ವಿಭಾಗದ ವತಿಯಿಂದ ಏರ್ಪಡಿಸಿದ್ದ ಶೌರ್ಯ ಜಾಗರಣ ಯಾತ್ರೆ ಸಮಾರೋಪದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಸಾವಿರ ವರ್ಷ ಅರಬ್ರು ಭಾರತ ಆಳಿದರು ಎಂದು ಇತಿಹಾಸದಲ್ಲಿ ಬರೆದಿರುವುದು ಶುದ್ಧ ಸುಳ್ಳು. ಪರಕೀಯರ ಕೈಗೆ ಭಾರತ ದೇಶ ಇಡೀಯಾಗಿ ಯಾವತ್ತೂ ಹೋಗಿಲ್ಲ. ಹಾಗಾಗಿ ಭಾರತದ ಇತಿಹಾಸ ಶೌರ್ಯದಿಂದ ಕೂಡಿದೆ. ನಾವು ಯುದ್ಧಗಳಲ್ಲಿ ಸೋತಿರಬಹುದು ಆದರೆ, ಸತ್ತಿಲ್ಲ. ನಮ್ಮ ಪರಾಕ್ರಮ ಕುಂದಿಲ್ಲ. ನಮ್ಮ ರಾಜರು ಆಕ್ರಮಣಗಳನ್ನು ತಡೆಯುತ್ತ ಸಾವಿರಾರು ವರ್ಷಗಳಿಂದ ದೇಶದ ಸ್ವಾತಂತ್ರ$್ಯಕ್ಕಾಗಿ ಹೋರಾಡುತ್ತ ಬಂದಿದ್ದಾರೆ. ಶೌರ್ಯಕ್ಕೆ ಇದಕ್ಕಿಂತ ಸಾ ಬೇಕೆ? ಎಂದು ಪ್ರಶ್ನಿಸಿದರು.

ದೇಶದಲ್ಲಿ ಇಂಗ್ಲಿಷರ ವಿರುದ್ಧದ ಹೋರಾಟವನ್ನೇ ಸ್ವಾತಂತ್ರ$್ಯ ಚಳವಳಿ ಎಂದು ಬಿಂಬಿಸಲಾಗಿದೆ. ಇದಕ್ಕಿಂತ ಮುಂಚೆ ಸಾವಿರಾರು ವರ್ಷಗಳ ಹಿಂದೆ ದೇಶದ ಮೇಲೆ ದಾಳಿಗಳಾಗಿವೆ. ಅಂದು ಆಕ್ರಮಣಗಳ ವಿರುದ್ಧ ಹೋರಾಡಿದ್ದು ಸ್ವಾತಂತ್ರ$್ಯ ಹೋರಾಟವೇ ಆಗಿದೆ ಎಂದು ಪ್ರತಿಪಾದಿಸಿದರು.

ಇಂಗ್ಲಿಷರು ತಮ್ಮ ಅನುಕೂಲಕ್ಕೆಂದು ಕಾಂಗ್ರೆಸ್ ಹುಟ್ಟು ಹಾಕಿದ್ದರು. ಆದರೆ, ಅದನ್ನು ಮುಂದೆ ಅವರ ವಿರುದ್ಧದ ಸಂಟನೆಗೆ ಬಳಸಿದವರು ಬಾಲಗಂಗಾಧರ ತಿಲಕರು. ಹೀಗೆ ಇತಿಹಾಸದಲ್ಲಿ ಹೇಳಬೇಕಾಗಿದ್ದನ್ನು ಬಿಟ್ಟು ಉಳಿದೆಲ್ಲ ವಿಷಯಗಳನ್ನು ಸೇರಿಸಲಾಗಿದೆ ಎಂದು ರವೀಂದ್ರ ಅವರು ವಿಷಾದಿಸಿದರು.

ಕುಂದಗೋಳ ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸಿದ್ದರು. ಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಮಹೇಶ ನಾಲವಾಡ ಅಧ್ಯಕ್ಷತೆ ವಹಿಸಿದ್ದರು.
ವಿಶ್ವ ಹಿಂದು ಪರಿಷತ್ ಮಹಾನಗರ ಅಧ್ಯಕ್ಷ ಸಂಜೀವ ಬಡಸ್ಕರ್, ಶಿವಾನಂದ ಸತ್ತಿಗೇರಿ, ರವಿ ದಂಡಿನ, ಬಸವರಾಜ, ವಿನಾಯಕ ತಲಗೇರಿ, ವೀಣಾ ಹೆಗಡೆ, ಸುನಿತಾ ಹಿರೇಗೌಡರ, ರು ಯಲಕ್ಕನವರ, ವಿಜಯ ರಸಾಗರ, ವಿವೇಕ ಮೊಕಾಶಿ, ಸಂದೀಪ ಬೂದಿಹಾಳ, ಸುಭಾಸಸಿಂಗ್ ಜಮಾದಾರ, ಇತರರು ಪಾಲ್ಗೊಂಡಿದ್ದರು.

ವಿಶ್ವ ಹಿಂದು ಪರಿಷತ್ ಮಹಾನಗರ ಕಾರ್ಯದಶಿರ್ ರಮೇಶ ಕದಂ ಪ್ರಾಸ್ತಾವಿಕ ಮಾತನಾಡಿದರು.