ತಲ್ಲೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಮುರುಘೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶಂಕರಗೌಡ ಪಾಟೀಲ, ಈರಣ್ಣ ಹುದ್ದಾರ ಇತರರಿದ್ದರು. 
ಜಿಲ್ಲೆ

ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು

ತಲ್ಲೂರ: ಯುವ ಪೀಳಿಗೆಗೆ ಸಂಸ್ಕೃತಿ, ಧರ್ಮ, ಆಚಾರ ತಿಳಿಸಲು ಮಠ ಮಂದಿರದಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ಕಿರಿಯರೊಂದಿಗೆ ಹಿರಿಯರು ಪಾಲ್ಗೊಳ್ಳುವುದು ಅವಶ್ಯ ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದರು.

ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಯಾ ಮಾಸಗಳಲ್ಲಿ ಆಚರಿಸಲಾಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದರು.

ಮುಖಂಡ ಶಂಕರಗೌಡ ಪಾಟೀಲ, ಈರಣ್ಣ ಹುದ್ದಾರ, ಬಾಲಕೃಷ್ಣ ಪತ್ತಾರ ಮಾತನಾಡಿದರು. ಬಸಯ್ಯ ಮಠಪತಿ, ವಿಜಯ ಉಪ್ಪಿನ, ಉಮೇಶ ಯರಗಟ್ಟಿ, ನೀಲಕಂಠ ಹಂಜಿ, ರಾಜು ಉಪ್ಪಿನ, ರವೀಂದ್ರ ಜೊಲಾಪುರಿ, ಆರ್.ಎಸ್.ಕಲ್ಲನ್ನವರ, ಮಹಾಂತೇಶ ಹೊಸಮಠ, ದರ್ಶನ ಉಪ್ಪಿನ, ಅಪ್ಪನ್ನ ಯರಗಟ್ಟಿ, ಮೌನೇಶ ಬಡಿಗೇರ, ಮಹಾಂತೇಶ ಮಾಸ್ತಮರಡಿ, ಸಂಜಯ ಯರಗಟ್ಟಿ, ಮಂಜು ಕಾಜಗಾರ ಇತರರಿದ್ದರು.