ಚಿತ್ರದುರ್ಗ: ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ಜಿಲ್ಲಾಡಳಿತ ನಗರದ ತರಾಸು ರಂಗ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಕನಕರು
ಜಾತಿ ಪಂಥಗಳ ಮೀರದ ದಾರ್ಶನಿಕರು ಎಂದರು.
ರಾಜ್ಯ ಸರ್ಕಾರದಿಂದ ಅನೇಕ ಸಾಧಕರ ಜಯಂತಿಯನ್ನು ಆಚರಿಸಲಾಗುತ್ತಿದೆ. ಇದರ ಉದ್ದೇಶ ಮಹನೀಯರ ವಿಚಾರ ಧಾರೆಗಳು ಸಮಾಜದ ಎಲ್ಲ ವರ್ಗದ ಜನರಿಗೂ ತಲುಪಿಸುವುದಾಗಿದೆ. ಒನಕೆ ಓಬವ್ವ ಜಯಂತಿಯನ್ನೂ ಆಚರಿಸಲಾಗಿದೆ. ಕನಕದಾಸರು ಜಾತಿ ಪದ್ಧತಿ ನಿರ್ಮೂಲನೆಗೆ ಹೋರಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸುವ ಮೂಲಕ ಶೋಷಿತ ವರ್ಗದವರಿಗೆ ಸಾಮಾಜಿಕ ಭದ್ರತೆಯನ್ನು ಕಲ್ಪಿಸಿದರು. ಬಸವಣ್ಣವರ ತತ್ವ,ಆಶಯ ಸಂವಿಧಾನದಲ್ಲಿ ಅಡಕವಾಗಿವೆ. ಕುರುಬ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಸಮುದಾಯದ ರಾಜಕೀಯ ಧುರೀಣರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ನೀಡಬೇಕು.ಇದಕ್ಕೆ ನನ್ನ ಬೆಂಬಲವಿದೆ.
ಚಿತ್ರದುರ್ಗದಲ್ಲಿ ಸರ್ಕಾರಿ ಜಾಗ ಲಭ್ಯವಿದ್ದರೆ ಸಮುದಾಯಕ್ಕೆ ಮಂಜೂರು ಮಾಡಿಸುವ ಹಾಗೂ ಕುರುಬ ವಿದ್ಯಾರ್ಥಿ ನಿಲಯಕ್ಕೆ ನೂತನ ಕಟ್ಟಡಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರು ಮಾತನಾ ಡಿ,ಕನಕರು ಆಧ್ಯಾತ್ಮಿಕ ಅನುಭೂತಿಯಿಂದ ದಾಸ ಶ್ರೇಷ್ಠರಾದರು. ಸಾಮಾಜಿಕ ಪರಿಸ್ಥಿತಿ ಸುಧಾರಣೆಗೆ ಪ್ರಯತ್ನಿಸಿದ್ದರು. ಕೃಷ್ಣನನ್ನು ಒಲಿಸಿಕೊಂಡಿದ್ದ ಕನಕದಾಸರು ಸಾಹಿತ್ಯ,ಸಂಗೀತ ಕ್ಷೇತ್ರದಲ್ಲೂ ಮಹತ್ವದ ಸಾಧನೆ ಮಾಡಿದ್ದಾರೆ ಎಂದರು.
ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರೊ.ಸಿ.ಕೆ.ಮಹೇಶ್ ಅವರು ಕನಕದಾಸರ ವಿಚಾರಧಾರೆಗಳ ಕುರಿತು ಮಾತನಾಡಿದರು. ಕನಕ ದಾಸರು ಕೆಳ ವರ್ಗಗಳ ನಾಯಕ. ಅವರಿಗೆ ರಾಜ್ಯಾಧಿಕಾರವಿದ್ದಾಗ ಅಸ್ಪಶ್ಯತೆ ಸನ್ನಿವೇಶ ಉಂಟಾಗಲಿಲ್ಲ. ಆಧ್ಯಾತ್ಮಕ ಸಾಧನೆಗೆ ಮುಂದಾ ದಾಗ ಉಡುಪಿಯಲ್ಲಿ ಕಹಿ ಘಟನೆ ಎದುರಿಸಬೇಕಾಯಿತು. ಇಂದಿಗೂ ಅಸ್ಪಶ್ಯತೆ ಜೀವಂತವಿದೆ. ಕನಕದಾಸರನ್ನು ಅವಮಾನಿಸಿದ್ದ ಸಿದ್ಧಾಂತಗಳಿ ಇಂದಿಗೂ ಮುಂದುವರಿದೆ. ಕನಕ ಕಿಂಡಿ ಕುರಿತು ವಿದ್ವಾಂಸರಲ್ಲಿ ಜಿಜ್ಞಾಸೆಯಿದೆ. ರಾಜಮಾರ್ಗ ಬಿಟ್ಟು,ಭಕ್ತಿ ಮಾರ್ಗ ಹಿಡಿದ ಕನಕರಿಗೆ ಜಾತಿ ಕಾರಣದಿಂದ ಅವಮಾನವಾಗಿದ್ದು ಸತ್ಯ. ಬುದ್ಧ,ಶರಣ ಪರಂಪರೆ ಮುಂದುವರಿದ ಭಾಗವಾಗಿದ್ದ ಕನಕರು,ಸಾಂಸ್ಕೃತಿಕ ಬದಲಾವಣೆ ನಾಯ ಕತ್ವ ವಹಿಸಿದ್ದರು. ಅವರ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡಯ್ಯಬೇಕಿದೆ ಕೆಳ ವರ್ಗದವರಿಗೆ ರಾಜಕೀಯ ಅಧಿಕಾರ ಸಿಗದೆ ಅಸ್ಪಶ್ಯತೆ ತೊಡೆದು ಹಾಕಲು ಸಾಧ್ಯವಾಗದೆಂದರು.
ನಗರಸಭೆ ಅಧ್ಯಕ್ಷೆ ಬಿ.ತಿಪ್ಪಮ್ಮ,ಸದಸ್ಯರಾದ ವೆಂಕಟೇಶ್,ಪಿ.ಕೆ.ಮೀನಾಕ್ಷಿ,ಮಲ್ಲಿಕಾರ್ಜುನ್,ಪೂಜಾ ಮಂಜುನಾಥ,ಜಿ.ಪಂ.ಸಿಇಒ ಎಂ.ಎಸ್. ದಿವಾಕರ್,ಎಡಿಸಿ ಇ.ಬಾಲಕೃಷ್ಣ,ಎಸಿ ಆರ್.ಚಂದ್ರಯ್ಯ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಜಿ ಲ್ಲಾ ಕುರುಬರ ಸಂಘದ ಅಧ್ಯಕ್ಷ ಎಸ್.ಶ್ರೀರಾಮ್,ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ ಬಿ.ಟಿ.ಜಗದೀಶ್,ಜನಪ್ರತಿನಿಧಿ ಗಳು,ಕುರುಬ ಸಮಾಜದ ಮುಖಂಡರು,ಗಣ್ಯರು ಇದ್ದರು.
ಆಯಿತೋಳು ವಿರೂಪಾಕ್ಷಪ್ಪ ತಂಡದ ಕಲಾವಿದರು ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರಂಭಕ್ಕೂ ಮು ನ್ನ ಹೊಳಲ್ಕೆರೆ ರಸ್ತೆ ಕನಕ ವೃತ್ತದಿಂದ ತರಾಸು ರಂಗಮಂದಿರದವರೆಗೂ ಜಾನಪದ ಕಲಾತಂಡಗಳೊಂದಿಗೆ ಕನಕದಾಸರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು.
----