ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು - ಮಠಂದೂರು

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಜನರು ಹಾಗೂ ಜಾನುವಾರುಗಳು ಸಮಸ್ಯೆಗೊಳಗಾಗುತ್ತಿದೆ. ರೈತಾಪಿ ವರ್ಗ ಬರುವ ಬೇಸಿಗೆಯಲ್ಲಿ ಬೆಳೆಯನ್ನು ಹೇಗೆ ಉಳಿಸುವುದು ಎಂಬ ಚಿಂತೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ೫೦೦ಮಿಲಿ ಲೀಟರ್ ಮಳೆ ಕೊರತೆ ಇದ್ದು, ಸಂಪೂರ್ಣ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡದೆ ತಾರತಮ್ಯ ನೀತಿಯನ್ನು ಸರ್ಕಾರ ಮಾಡಲಾಗಿದೆ. ತಕ್ಷಣ ಸಂಪೂರ್ಣ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕೆಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ವಿಮೆ ವಿಸ್ತರಣೆ:
ಬರ ಪೀಡಿತ ಜಿಲ್ಲೆಗೆ ಕೇಂದ್ರ ಹಾಗೂ ರಾಜ್ಯದಿಂದ ದೊರಕುವ ಸವಲತ್ತುಗಳನ್ನು ಜಿಲ್ಲೆಯ ಎಲ್ಲಾ ತಾಲೂಕಿಗೆ ವಿಸ್ತರಿಸಿ ನ್ಯಾಯ ನೀಡಬೇಕು. ಬರದ ಸಂದರ್ಭ ಬೆಳೆ ವಿಮಾ ಯೋಜನೆಗಳ ಮೂಲಕ ರೈತರು ಪರಿಹಾರ ಪಡೆಯುವ ಕಾರ್ಯವಾಗುತ್ತದೆ. ಪ್ರಾಕೃತಿಕ ವೈಪರೀತ್ಯದಿಂದ ರೈತ ಕಂಗಾಲಾಗಿರುವ ಸಮಯದಲ್ಲಿ ಎರಡು ತಿಂಗಳ ಅವಧಿಗೆ ವಿಸ್ತರಣೆಯಾಗಿದೆ. ಕಳೆದ ಮೂರು ವರ್ಷದಿಂದ ರೈತರಿಗೆ ಪ್ರಧಾನ ಮಂತ್ರಿ ಫಸಲು ವಿಮಾ ಹಾಗೂ ವಾಣಿಜ್ಯ ಬೆಳೆಗಳಿಗೆ ಹವಮಾನ ಆಧರಿತ ಬೆಳೆ ವಿಮೆ ದೊರೆಯುತ್ತಿದ್ದು ಈ ವರ್ಷ ಎರಡು ತಿಂಗಳು ತಡವಾಗಿ ಅರ್ಜಿ ಹಾಕಲು ಅವಕಾಶ ಆಗಿರುತ್ತದೆ, ಇದೀಗ ಈ ಎರಡು ವಿಮಗಳಿಗೆ ಬೆಳೆ ಸಮೀಕ್ಷೆ ಆಪ್ ನಲ್ಲಿ ಕಡ್ಡಾಯಗೊಳಿಸಿ ಪಹಣಿ ನಮೂದು ಮಾಡಬೇಕು ಎಂದು ಆದೇಶವಾಗಿರುವುದು ಕೃಷಿಕರಿಗೆ ಸಮಸ್ಯೆಯಾಗಿದೆ ಎಂದರು.

ಆಪ್ ನಲ್ಲಿ ಸಮೀಕ್ಷೆ ಅವಕಾಶ:
ಸರಕಾರ ನಿಗದಿ ಪಡಿಸಿದ ಆಪ್ ನಲ್ಲಿ ರೈತರಿಗೆ ಮಾಹಿತಿ ಕೊರತೆ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಪುತ್ತೂರು ತಾಲೂಕಿನಲ್ಲಿ ಕೇವಳ ಶೇ.೪೦ ಸಮೀಕ್ಷೆ ಸಂಪೂರ್ಣವಾಗಿದೆ. ಕರ್ನಾಟಕದಲ್ಲಿ ಸುಮಾರು ೨೦ ಸಾವಿರ ಜನ ಬೆಳೆ ವಿಮೆ ಸಮೀಕ್ಷೆಗಾರರೆಂದು ಇವರಿಗೆ ಪಹನಿಗೆ ಒಂದರಂತೆ ೧೦ರೂ ಅದೂ ಪಾವತಿಯಾಗದೆ ಅವರು ಉತ್ಸಾಹ ತೋರಿಸುತ್ತಿಲ್ಲ. ಆದ್ದರಿಂದ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಸಚಿವರು, ಮುಖ್ಯಮಂತ್ರಿಗಳ ಮುಖಾಂತರ ಬೆಳ ಸಮೀಕ್ಷೆಯನ್ನು ಒಂದು ತಿಂಗಳು ಮುಂದುವರಿಸಲು ಎಲ್ಲಾ ಕೃಷಿಕರು ಬೆಳೆ ಸಮೀಕ್ಷೆ ಆಪ್ ನಲ್ಲಿ ನೊಂದಾಯಿಸಿಕೊಳ್ಳಲು ಅವಕಾಶ ಮಾಡಿ ಕೊಡಬೇಕು ಎಂದು ಆಗ್ರಹಿಸಿದರು.

ಬರ ಪೀಡಿತ ಪ್ರದೇಶದಲ್ಲಿ ಕೃಷಿಕರ ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಸಾಲಗಳನ್ನು ಮರುಪಾವತಿಗೆ ಹೆಚ್ಚುವರಿ ಕಾಲಾವಕಾಶಗಳನ್ನು ನೀಡಿರುವ ಸರ್ಕಾರ ಈ ಯೋಜನೆಯನ್ನು ದಕ್ಷಿಣ ಕನ್ನಡಕ್ಕೂ ನೀಡುವ ಮೂಲಕ ಬೆಳೆಗಾರರಿಗೆ ಅನುಕೂಲಗಳನ್ನು ಮಾಡಿಕೊಡಬೇಕೆಂದು ಹೇಳಿದರು.