ಜಿಲ್ಲೆ

ಮುದಿಮಡುಗು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ

ರಾಯಲ್ಪಾಡು: ಸರ್ಕಾರ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುವ ನಿಟ್ಟಿನಲ್ಲಿ ಗಡಿ ಭಾಗದ ಪಂಚಾಯಿತಿ ಕೇಂದ್ರಗಳಲ್ಲಿ ಲಕ್ಷಾಂತರ ರೂ. ಅನುದಾನಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಆದರೆ ಸ್ಥಳಿಯ ಹಾಗೂ ತಾಲೂಕು ಅಧಿಕಾರಿಗಳ ರ್ನಿಲಕ್ಷ$್ಯದಿಂದಾಗಿ ಈ ಆರೋಗ್ಯ ಕೇಂದ್ರಗಳು ಧೂಳಿನಿಂದ ತುಂಬಿಹೋಗಿದ್ದು, ಮೂಲ ಸೌಕರ್ಯಗಳಿಲ್ಲದೇ ಸೊರಗುತ್ತಿವೆ. ಇದಕ್ಕೆ ನಿದರ್ಶನವೆಂಬಂತೆ ಶ್ರೀನಿವಾಸಪುರ ತಾಲೂಕು ಮುದಿಮಡುಗು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ದುಸ್ಥಿತಿಯೇ ಪ್ರತ್ಯಕ್ಷ ಸಾ.

ರಾಯಲ್ಪಾಡು ಹೋಬಳಿಯ ಮುದಿಮಡುಗು ಗ್ರಾಮದಲ್ಲಿ ಈ ಹಿಂದೆ ಮಾಜಿ ಶಾಸಕ ಕೆ.ಆರ್​.ರಮೇಶ್​ಕುಮಾರ್​ ಅಧಿಕಾರವಧಿಯಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಬೃಹತ್​ ಕಟ್ಟಡ ನಿರ್ಮಿಸಿಕೊಟ್ಟಿದ್ದರು. ಆದರೆ ಇಂದು ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿಯೇ ಇಲ್ಲದೇ ಬರಡಾಗಿದೆ.

ಆರೋಗ್ಯ ಕೇಂದ್ರಕ್ಕೆ 18 ಹಳ್ಳಿಗಳು ಸೇರಿ ಅಂದಾಜು 8 ಸಾವಿರ ಜನ ರೋಗಿಗಳು ಭೇಟಿ ನೀಡುತ್ತಾರೆ. ಆದರೆ, ವೈದ್ಯರು ಸಹಿತ ಇಬ್ಬರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ವಾರಕ್ಕೆ ಎರಡು ಬಾರಿ ಲ್ಯಾಬ್​ಟೆಕ್ನಿಷಿಯನ್​ ಕೇಂದ್ರಕ್ಕೆ ಬರುತ್ತಾರೆ. ಸಿಬಂದ್ದಿ ರಜೆ ಹಾಕಿದರೆ ನಿಗದಿತ ಜನರಿಗೆ ಚಿಕಿತ್ಸೆ ನೀಡಲು ತೊಂದರೆಯಾಗುತ್ತದೆ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.

ಆರೋಗ್ಯದಲ್ಲಿ ಏರುಪೇರು ಆದಲ್ಲಿ ತಮ್ಮ ಮನೆಗಳಲ್ಲಿಯೇ ಚಿಕಿತ್ಸೆ ಮಾಡಿಕೊಳ್ಳುತ್ತಿರುವ ಅನೇಕ ಉದಾಹರಣೆಗಳಿವೆ. ಈ ಆರೋಗ್ಯ ಕೇಂದ್ರದಿಂದ ಪ್ರತಿ ಹಳ್ಳಿಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ತಾಲೂಕು ಅಧಿಕಾರಿಗಳು ಸೂಚಿಸಿಬೇಕು. ಆದರೆ ತಾಲೂಕಾಧಿಕಾರಿಗಳ ರ್ನಿಲಕ್ಷ$್ಯ ಹಾಗೂ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಸದ್ಭಳಕೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಬಹುತೇಕ ರೋಗಿಗಳು ಪ್ರಾಥಮಿಕ ಹಂತದಲ್ಲೇ ತಜ್ಞ ವೈದ್ಯರ ಬಳಿ ತಪಾಸಣೆಗೆ ಒಳಗಾದಾಗ ರೋಗ ತಡೆಗಟ್ಟಬಹುದಾಗಿದೆ. ಗ್ರಾಮೀಣ ಭಾಗದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಜನರ ಅಗತ್ಯತೆಗಳ ಮೇಲೆ ಮತ್ತು ಸಾಧ್ಯವಾದಷ್ಟು ಬೇಗ ಆರೋಗ್ಯ ಪ್ರಚಾರ ಮತ್ತು ರೋಗ ತಡೆಗಟ್ಟುವಿಕೆಯಿಂದ ಚಿಕಿತ್ಸೆ ಪುರ್ನವಸತಿ ಮತ್ತು ಉಪಶಮನ, ಆರೈಕೆ ಪಡೆಯಬಹುದಾಗಿದೆ. ಈ ದೃಷ್ಟಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಸಲಿದ್ದು, ನಾಗರಿಕರು ಆರೋಗ್ಯದ ಬಗ್ಗೆ ರ್ನಿಲಕ್ಷ$್ಯ ಮೂಲ ಸೇವೆ ಒತ್ತು ನೀಡಬೇಕಿದೆ.

ಸರ್ಕಾರವು ಗ್ರಾಮೀಣ ಭಾಗದಲ್ಲಿ ಅನೇಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಆದರೆ ಜನರ ರ್ನಿಲಕ್ಷ$್ಯವೋ, ಅಧಿಕಾರಿಗಳ ರ್ನಿಲಕ್ಷ$್ಯವೋ ಎಂಬಂತೆ ಆರೋಗ್ಯ ಯೋಜನೆಗಳು ಕೆಲ ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾತು ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.

ಜಿಲ್ಲೆಯ ಹಿರಿಯ ಅಧಿಕಾರಿಗಳು ಆರೋಗ್ಯ ಕೇಂದ್ರದತ್ತ ಭೇಟಿ ನೀಡಿ ಇಲಾಖೆ ಯೋಜನೆಗಳು ಸದ್ಬಳಕೆಯಾಗುತ್ತಿದೆಯೋ ಇಲ್ಲವೋ ಎಂದು ಪರಿಶೀಲಿಸಬೇಕಾಗಿದೆ ಎಂಬುದು ನಾಗರಿಕರ ಒತ್ತಾಯವಾಗಿದೆ.