ಜಿಲ್ಲೆ

ಕಿರುಚಿತ್ರ ಚಿತ್ರೀಕರಣ ಇಂದಿನಿಂದ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಧಾರವಾಡಿಯನ್ಸ್​ ತಂಡದ ವತಿಯಿಂದ ನಿರ್ಮಿಸುತ್ತಿರುವ ಮಾಯಾಜಾಲ ಕಿರು ಚಿತ್ರದ ಚಿತ್ರೀಕರಣವನ್ನು ಜ. 7ರಿಂದ ಆರಂಭಿಸಲಾಗುವುದು ಎಂದು ಕಲಾವಿದ ಪ್ರಭು ಹಂಚಿನಾಳ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ತಿಕ ರೊಟ್ಟಿಮಠ ಹಾಗೂ ಪ್ರಶಾಂತ ಹಂಚಿನಾಳ ನೇತೃತ್ವದಲ್ಲಿ ಚಿತ್ರ ನಿರ್ಮಿಸುತ್ತಿದ್ದು, ಜ. 7ರಂದು ಬೆಳಗ್ಗೆ 10.30ಕ್ಕೆ ಕೆಸಿಡಿ ಗಣಪತಿ ದೇವಸ್ಥಾನ ಬಳಿ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಚಾಲನೆ ನೀಡಲಿದ್ದಾರೆ ಎಂದರು.

ಕಿರುಚಿತ್ರದ ಚಿತ್ರೀಕರಣ ಧಾರವಾಡ ಸುತ್ತಮುತ್ತಲು ನಡೆಯಲಿದೆ. ನಿಗೂಢ ಹಾಗೂ ರೋಮಾಂಚನಕಾರಿ ಕಥೆ ಹೆಣೆಯಲಾಗಿದೆ. ಈ ಚಿತ್ರ ಒಟ್ಟು ೨ ಭಾಗಗಳಲ್ಲಿ ಸಿದ್ಧವಾಗಲಿದೆ. ಕಿರುಚಿತ್ರದಲ್ಲಿ ಶಿಕ್ಷಕ ಎನ್​.ಬಿ. ದ್ಯಾಪುರ, ಆನಂದ ಜೋಶಿ, ಕಾರ್ತಿಕ ರೊಟ್ಟಿಮಠ, ಕಿರಣ ಕುರಿ, ಇತರರು ಅಭಿನಯಿಸಲಿದ್ದಾರೆ ಎಂದರು.

ಡಾ. ಕಲ್ಮೇಶ ಹಾವೇರಿಪೇಟ, ಪ್ರಶಾಂತ ಹಂಚಿನಾಳ, ಪ್ರವಿಣ ಬಡಿಗೇರ, ಅಕ್ಷಯ ಗಾಯಕರ, ಇತರರು ಇದ್ದರು.