ಜಿಲ್ಲೆ

ದಸರಾ ಚಲನ ಚಿತ್ರೋತ್ಸವ ಅಂಗವಾಗಿ ಕಿರುಚಿತ್ರ ಸ್ಪರ್ಧೆ

ಮೈಸೂರು: 2023ರ ಮೈಸೂರು ದಸರಾ ಚಲನಚಿತ್ರೋತ್ಸವ ಉಪ ಸಮಿತಿ ವತಿಯಿಂದ ಕಿರುಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಕಿರು ಚಿತ್ರವು 10 ನಿಮಿಷಗಳ ಅವಧಿ ಮೀರಿರಬಾರದು. 5 ನಗದು ಬಹುಮಾನಗಳು ಹಾಗೂ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ವಿತರಿಸಲಾಗುವುದು.

ಕಿರುಚಿತ್ರವನ್ನು ಗೂಗಲ್ ಡ್ರೈವ್ ಅಥವಾ ಯೂಟ್ಯೂಬ್‌ಗೆ ಅಪ್ಲೋಡ್ ಮಾಡಿ ಅದರ ಲಿಂಕ್ ಅನ್ನು ಅರ್ಜಿಯಲ್ಲಿ ನಮೂದಿಸಬೇಕು. ನೋಂದಣಿಗೆ ಸೆ. 30 ಕೊನೆಯ ದಿನಾಂಕವಾಗಿದ್ದು, ನೋಂದಣಿ ಶುಲ್ಕ 100 ರೂ. ಪಾವತಿಸಬೇಕು. ಹೆಚ್ಚಿನ ವಿವರಗಳಿಗೆ  myDFF2023    2023 ಫೇಸ್‌ಬುಕ್ ಹಾಗೂ ಇನ್ಸ್ಟ್ರಾಗ್ರಾಮ್ ಪೇಜ್ ಫಾಲೋ ಮಾಡುವುದು ಹಾಗೂ ದೂ.ಸಂ:7411564510 ಅನ್ನು ಸಂಪರ್ಕಿಸಬಹುದು ಎಂದು ದಸರಾ ಚಲನಚಿತ್ರೋತ್ಸವ ಉಪ ವಿಶೇಷಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸವಿತಾ ಎಂ.ಕೆ ಪ್ರಕಟಣೆ ತಿಳಿಸಿದ್ದಾರೆೆ.