ಮುದ್ದೇಬಿಹಾಳದಲ್ಲಿ ವಿದ್ಯುತ್​ ಶಾರ್ಟ್​ ಸಕ್ಯೂರ್ಟ್​ನಿಂದ ತೊಗರಿ ಬೆಳೆ ನಾಶವಾಗಿರುವುದನ್ನು ಗ್ರಾಮ ಸಹಾಯಕ ಪಾವಡೆಪ್ಪ ತಳವಾರ ಪರಿಶೀಲಿಸಿದರು. ರೈತ ಸೋಮೇಶ ನಾಗರಡ್ಡಿ ಇದ್ದಾರೆ. 
ಜಿಲ್ಲೆ

ಶಾರ್ಟ್​ ಸಕ್ಯೂರ್ಟ್​ನಿಂದ ತೊಗರಿ ಬೆಳೆ ಹಾನಿ

ಗಿರೀಶ ಸಗರ

ಮುದ್ದೇಬಿಹಾಳ : ತಾಲೂಕಿನ ಆಲಕೊಪ್ಪರ ಗ್ರಾಮ ವ್ಯಾಪ್ತಿಯ ಸರ್ವೆ ನಂ. 46ರ 4 ಎಕರೆ ಜಮೀನಿನಲ್ಲಿ ಕಟಾವು ಹಂತಕ್ಕೆ ಬಂದಿದ್ದ ತೊಗರಿ ಬೆಳೆ ವಿದ್ಯುತ್​ ಟ್ರಾನ್ಸ್​ಾರ್ಮರ್​ನ ತಂತಿ ತಾಗಿ ಬೆಂಕಿಯ ಕಿಡಿಹೊತ್ತಿ ಬೆಳೆ ಹಾನಿಯಾದ ಟನೆ ಶುಕ್ರವಾರ ಸಂಭವಿಸಿದೆ.

ಶುಕ್ರವಾರವೇ ಈ ಟನೆ ನಡೆದಿದ್ದರೂ ಶನಿವಾರ ಬೆಳಗ್ಗೆ ಹೋಗಿ ನೋಡಿದಾಗ ತೊಗರಿ ನಾಶವಾಗಿರುವುದು ಗೊತ್ತಾಗಿದೆ. ಹಾನಿಗೊಳಗಾದ ರೈತ ಬಸವನ ಬಾಗೇವಾಡಿ ತಾಲೂಕಿನ ಕಾನ್ಯಾಳ ಗ್ರಾಮದ ಸೋಮೇಶ ಶಂಕರಪ್ಪ ನಾಗರಡ್ಡಿ ಅವರು, ಕೈಗೆ ಬಂದ ಬೆಳೆ ನಾಶವಾಗಿದ್ದು, ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಗ್ರಾಮ ಆಡಳಿತಾಧಿಕಾರಿ (ತಲಾಟಿ) ಹರ್ಷಿತ್​ ಗೌಡ ಅವರು ಗ್ರಾಮ ಸಹಾಯಕ ಪಾವಡೆಪ್ಪ ತಳವಾರ ಅವರು ಬೆಳೆ ಹಾನಿಯ ವರದಿಯನ್ನು ಮೇಲಧಿಕಾರಿಗಳಿಗೆ ಕಳಿಸುವುದಾಗಿ ತಿಳಿಸಿದ್ದಾರೆ.