ಬೆಂಕಿಗೆ ಆಹುತಿಯಾದ ಅಂಗಡಿ.  
ಜಿಲ್ಲೆ

ಅಂಗಡಿಗೆ ಬೆಂಕಿ: ಸುಟ್ಟು ಕರಕಲಾದ ವಸ್ತುಗಳು

store caught fire items burnt koppal

Kopala - Raveendra V K

ಕೊಪ್ಪಳ: ನಗರದ ಬಸವೇಶ್ವರ ವೃತ್ತ ಸಮೀಪದ‌ ಆಟೋ ಮೊಬೈಲ್ ಅಂಗಡಿ ಹಾಗೂ ಹೋಟೇಲ್ಗೆ ಬೆಂಕಿ‌ ತಗುಲಿ ಅಂಗಡಿಯಲ್ಲಿನ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ.

ಶನಿವಾರ ಬೆಳಗಿನ ಜಾವ ಎರಡು ಗಂಟೆಗೆ ಹೋಟೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಿಲಿಂಡರ್ ಸ್ಫೋಟಗೊಂಡಿದ್ದು, ಎರಡೂ ಅಂಗಡಿಗಳಿಗೆ ಬೆಂಕಿ ಆವರಿಸಿದೆ. ನೋಡುತ್ತಿದ್ದಂತೆ ಬೆಂಕಿ ಪ್ರಮಾಣ ಹೆಚ್ಚಿದ್ದು, ವಸ್ತುಗಳೆಲ್ಲ ಸುಟ್ಟಿವೆ. ಹೋಟೆಲ್ ನಲ್ಲಿದ್ದ ಒಂದು ಬೈಕ್ ಸಹ ದಹನವಾಗಿದೆ.

ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಶಫೀಕ್ ಎಂಬುವರಿಗೆ ಸೇರಿದ ಆಟೋ ಮೊಬೈಲ್‌ ಅಂಗಡಿ ಹಾಗೂ ಯಂಕಪ್ಪ ಎಂಬುವರಿಗೆ ಸೇರಿದ ಹೋಟೆಲ್ ಎಂದು ಗೊತ್ತಾಗಿದೆ.

ತಕ್ಷಣ ಪೊಲೀಸರು ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಜೀವನಕ್ಕೆ ಆಧಾರವಾಗಿದ್ದ ಅಂಗಡಿ ಕಳೆದಿಕೊಂಡ ಮಾಲೀಕರ ಕುಟುಂಬದವರು ಕಣ್ಣೀರು ಹಾಕಿದರು.