ಜಿಲ್ಲೆ

ಅಂಗಡಿ ಮಳಿಗೆಗೆಳ ಹರಾಜು

ಶಿವರಾಜ.ಎಂ

ಸೂಲಿಬೆಲೆ: ಇಲ್ಲಿನ ಗ್ರಾಪಂ ಅನುದಾನದಲ್ಲಿ ನಿರ್ಮಾಣವಾಗಿರುವ 5 ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಭಾನುವಾರ ಪಿಡಿಒ ಮಂಜುನಾಥ್ ನೇತೃತ್ವದಲ್ಲಿ ನಡೆಯಿತು. ಮುಂಗಡ 1 ಲಕ್ಷ ರೂ. ಪಾವತಿ ಮಾಡಿ 7 ಜನರು ಬಿಡ್‌ನಲ್ಲಿ ಭಾಗಿಯಾಗಿದ್ದರು. ಕ್ರಮವಾಗಿ ಮೊದಲನೆ ಮಳಿಗೆ 16,200, 2ನೇ ಮಳಿಗೆ 5,800, 3ನೇ ಮಳಿಗೆ 5,200, 4ನೇ ಮಳಿಗೆ 4,050, 5ನೇ ಮಳಿಗೆ 4,050 ರೂ. ಮಾಸಿಕ ಬಾಡಿಗೆಗೆ ಹರಾಜಾದವು.
ಮುಖಂಡ ಅಲ್ತಾಪ್‌ಪಾಷ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 87 ಅಂಗಡಿ ಮಳಿಗೆಗಳಿದ್ದು, ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ. ಗ್ರಾಪಂನಲ್ಲಿ ಯಾವುದೇ ಭ್ರಷ್ಟಚಾರಕ್ಕೆ ಅವಕಾಶ ನೀಡದೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದರು.