ಹುಬ್ಬಳ್ಳಿ: ದಸರಾ ಹಾಗೂ ದೀಪಾವಳಿ ಅಂಗವಾಗಿ ನವೋದ್ಯಮಿಗಳಿಗೆ ಪ್ರೋತ್ಸಾಹಿಸುವುದು ಹಾಗೂ ವ್ಯಾಪಾರಸ್ಥರು, ಹೂಡಿಕೆದಾರರಿಗೆ ನೆರವಾಗಲು ಆರು ತಿಂಗಳು ಬಾಡಿಗೆ ರಹಿತ ಮಳಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ಯಶಸ್ವಿ ಡೆವಲಪರ್ಸ್ ಮಾಲೀಕರಾದ ಮೃತ್ಯುಂಜಯ ಮರೋಳ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯ ಗೋಕುಲ ರಸ್ತೆ ಗಾಂಧಿನಗರ ಕುಮಾರ ಪಾರ್ಕ್ನಲ್ಲಿ ಯಶಸ್ವಿ ಎನ್ಕ್ಲೇವ್ ವಾಣಿಜ್ಯ ಮಳಿಗೆಯಲ್ಲಿ ಈ ಯೋಜನೆ ಜಾರಿ ಮಾಡಲಾಗಿದೆ. ಮಹಿಳೆಯರಿಗೆ ವಿಶೇಷವಾಗಿ ಏಳು ತಿಂಗಳ ವರೆಗೆ ಬಾಡಿಗೆ ಇಲ್ಲದೇ ಮಳಿಗೆ ನೀಡಲಾಗುತ್ತಿದೆ ಎಂದರು.
ಕಳೆದ 15 ವರ್ಷದಿಂದ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಉತ್ತಮ ಗುಣಮಟ್ಟದಿಂದ ಮಳಿಗೆ ನಿಮಿರ್ಸಲಾಗಿದೆ. ಆರು ತಿಂಗಳು ಬಾಡಿಗೆ ಇಲ್ಲ. ವಿದ್ಯುತ್ ಬಿಲ್, ನಿರ್ವಹಣೆ ಶುಲ್ಕ ಮಾತ್ರ ಪಾವತಿಸಬೇಕು. ಒಂದು ವೇಳೆ ಆರು ತಿಂಗಳ ನಂತರ ತಮಗೆ ಬಿಜನೆಸ್ ಬೇಡ ಎಂದಾದರೆ ಡಿಪಾಸಿಟ್ ಹಣ ವಾಪಸ್ ನೀಡಲಾಗುವುದು. ಆಸಕ್ತರು, ತಮ್ಮನ್ನು ಸಂಪಕಿರ್ಬೇಕೆಂದು ಕೋರಿದರು.
ಸಂಸ್ಥೆಯ ಅನಂತ ಪೂಜಾರಿ ಗೋಷ್ಠಿಯಲ್ಲಿದ್ದರು.