ಜಿಲ್ಲೆ

ಕಲಬುರಗಿಯಲ್ಲಿ ಶೂಟೌಟ್: ATM ಕಳ್ಳರ ಕಾಲಿಗೆ ಗುಂಡು

ರಮೇಶ ಮೇಳಕುಂದಾ

ಕಲಬುರಗಿ: ಇದೇ ತಿಂಗಳು 9 ರಂದು ನಗರದ ಪೂಜಾರಿ ಚೌಕ್ ಬಳಿಯ ATM ದರೋಡೆ ಮಾಡಿದ ಆರೋಪಿಗಳ ಮೇಲೆ ಪೊಲೀಸರು ಆತ್ಮ ರಕ್ಷಣೆ ಗೆ ಫೈರಿಂಗ ಮಾಡಿದ ಘಟನೆ ಶನಿವಾರ ಬೆಳ್ಳಂ ಬೆಳಗ್ಗೆ ನಡೆದಿದೆ.

ಹರಿಯಾಣ ಮೂಲದ ಆರೋಪಿಗಳಾದ ತಸ್ಲೀಮ್ @ ತಸ್ಸಿ (28) , ಶರೀಫ್ ( 22) ಪೊಲೀಸ್ ಫೈರಿಂಗ್ ನಲ್ಲಿ ಗಾಯಗೊಂಡ ಎಟಿಎಂ ದರೋಡೆಕೋರರು.

ಕಲಬುರಗಿಯ ಬೇಲೂರ ಕ್ರಾಸ್ ಇಂಡಸ್ಟ್ರಿಯಲ್ ಏರಿಯಾ ಬಳಿ ಪೊಲೀಸರಿಂದ ಫೈರಿಂಗ್ ನಡೆದಿದೆ. ಅರೆಸ್ಟ್ ಮಾಡಲು ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನ ನಡೆಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲುಗಳಿಗೆ ಗುಂಡು ಹೊಡೆದ ಪೊಲೀಸರು.

PSI ಬಸವರಾಜ್ ಅವರಿಂದ ATM ಕಳ್ಳರ ಮೇಲೆ ಫೈರಿಂಗ್ ಮಾಡಲಾಗಿದೆ. ಘಟನೆಯಲ್ಲಿ ಪೊಲೀಸ್ ಕಾನ್ಟೇಬಲ್ ಗಳಾದ ಮಂಜು, ಫಿರೋಜ್, ರಾಜಕುಮಾರ್ ಅವರಿಗೂ ಗಾಯವಾಗಿದೆ.

ಗಾಯಾಳು ಪೊಲೀಸ್ ಕಾನ್ಸಟೇಬಲ್ ಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಂಡೆಟು ತಿಂದ ATM ಕಳ್ಳರನ್ನು ಕಲಬುರಗಿಯ ಜಿಮ್ಸಗೆ ದಾಖಲು ಮಾಡಲಾಗಿದೆ.

ಕಲಬುರಗಿಯಲ್ಲಿ ಇದೆ ತಿಂಗಳು 9 ರಂದು ಪೂಜಾರಿ ಚೌಕ್ ಬಳಿ SBIಎಟಿಎಂ ದರೋಡೆ ಆಗಿತ್ತು

ಇದೇ ಆರೋಪಿಗಳು 18 ಲಕ್ಷ ರೂ. ದೋಚಿಕೊಂಡು ಹೋಗಿದ್ದರು. ಸಬ್ ಅರ್ಬನ್ ಠಾಣೆ ಪ್ರಕರಣ ದಾಖಲಾಗಿತ್ತು.