ಶ್ರೀರಂಗಪಟ್ಟಣದ ಕ್ಲೀನಿಕ್‌ವೊಂದರಲ್ಲಿ ಶುಕ್ರವಾರ ಎಚ್.ವಿ.ಪುಟ್ಟಸ್ವಾಮಿ ಅವರ ನಿರ್ದೇಶನದಲ್ಲಿ ಧರ್ಮಿಷ್ಠ ಚಿತ್ರದ ಚಿತ್ರೀಕರಣ ನಡೆಯಿತು. 
ಜಿಲ್ಲೆ

‘ಧರ್ಮಿಷ್ಠ’ ಚಲನಚಿತ್ರದ ಚಿತ್ರೀಕರಣ

ಶ್ರೀರಂಗಪಟ್ಟಣ: ಪಟ್ಟಣ ಸೇರಿದಂತೆ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ‘ಧರ್ಮಿಷ್ಠ’ ಹೆಸರಿನ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ಸಾಹಿತಿ ಎಚ್.ವಿ.ಪುಟ್ಟಸ್ವಾಮಿ ತಾಲೂಕಿನವರೇ ಆಗಿದ್ದು, ಈಗಾಗಲೇ 3 ಚಿತ್ರಗಳನ್ನು ನಿರ್ಮಿಸಿ, ನಿದೇರ್ಶಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬಹುತೇಕ ಪಟ್ಟಣ ಸೇರಿದಂತೆ ತಾಲೂಕಿನ ಕಲಾವಿದರೇ ಅಭಿನಯಿಸುತ್ತಿದ್ದಾರೆ. ಸಮಾಜಮುಖಿ ಹಾಗೂ ಕೌಂಟುಬಿಕ ವಿಷಯಾಧಾರಿತ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಜೂನಿಯರ್ ರಾಜಕುಮಾರ್ ಸಹ ಅಭಿನಯಿಸುತ್ತಿದ್ದಾರೆ. ಜತೆಗೆ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು, ಪ್ರಗತಿಪರ ಚಿಂತಕರು ಹಾಗೂ ಕನ್ನಡಪರ ಹೋರಾಟಗಾರರು ವಿಶೇಷ ಪಾತ್ರಗಳಲ್ಲಿ ಅಭಿನಯಿಸಿ, ನಟನೆಯ ಮೂಲಕ ಸಮಾಜ ಜಾಗೃತಿಗೆ ಮುಂದಾಗಿದ್ದಾರೆ.

ಪಟ್ಟಣದ ವಿವಿಧೆಡೆ ಶುಕ್ರವಾರ ಚಿತ್ರೀಕರಣಗೊಳ್ಳುತ್ತಿದ್ದ ಸಂದರ್ಭದಲ್ಲಿ ಶ್ರೀ ರಂಗನಾಯಕಿ ಸ್ತ್ರೀ ಸಮಾಜದ ಪದಾಧಿಕಾರಿಗಳಾದ ಲಯನ್ ಸರಸ್ವತಿ, ಗಾಯಿತ್ರಿ ಅವರೊಂದಿಗೆ ಸಮಾಜ ಸೇವಕ ವೈದ್ಯ ಡಾ.ಶ್ರೀನಿವಾಸ್, ಕರವೇ ಅಧ್ಯಕ್ಷ ಚಂದಗಾಲು ಶಂಕರ್, ಕೆ.ಶೆಟ್ಟಹಳ್ಳಿ ಸುರೇಶ್, ರಾಂಪುರ ವಿಜಯೇಂದ್ರ ಪುಟ್ಟು ಸೇರಿದಂತೆ ಇತರರು ಇದ್ದರು.