ಜಿಲ್ಲೆ

ಶೂಟಿಂಗ್ ಚಾಂಪಿಯನ್‌ಶಿಪ್; ಎನ್‌ಸಿಸಿ ಕೆಡೆಟ್ ಪ್ರೀತಿ ಸವದಿಗೆ ಬೆಳ್ಳಿ ಪದಕ

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಎನ್‌ಸಿಸಿ ಘಟಕದ ಸೀನಿಯರ್ ಅಂಡರ್ ಆಫೀಸರ್ ಪ್ರೀತಿ ಚಂದ್ರಶೇಖರಯ್ಯ ಸವದಿ ಮಧ್ಯಪ್ರದೇಶದ ಮಾವೋದಲ್ಲಿ ಬುಧವಾರ ಜರುಗಿದ ‘32ನೇ ಜಿವಿ ಮೌಲಂಕರ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಫ್’ನಲ್ಲಿ ಬೆಳ್ಳಿ (ರಜತ) ಪದಕ ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾರೆ. 600 ಅಂಕಗಳಲ್ಲಿ 582 ಅಂಕಗಳನ್ನು ಶೂಟಿಂಗ್‌ದಲ್ಲಿ ಪಡೆಯುವ ಮೂಲಕ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ. 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಎನ್‌ಸಿಸಿ ಕೆಡೆಟ್ ಆಗಿರುವ ಪ್ರೀತಿ ಸವದಿ ಈ ಚಾಂಪಿಯನ್‌ಶಿಫ್‌ದಲ್ಲಿ ಈ ಸಾಧನೆ ಮಾಡಿದ ಪ್ರಥಮ ಬೆಳಗಾವಿ ಎನ್‌ಸಿಸಿ ಗ್ರುಫ್ ಕೆಡೆಟ್ ಎಂಬ ಅಭಿದಾನಕ್ಕೂ ಭಾಜನಳಾಗಿದ್ದಾಳೆ.
 ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಬೆಳಗಾವಿ ಗ್ರುಫ್ ಕಮಾಂಡರ್ ಕರ್ನಲ್ ಮೋಹನ್ ನಾಯ್ಕ, ಕರ್ನಲ್ ಕೆ. ಶ್ರೀನಿವಾಸ, 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಡಿಂಗ್ ಆಫೀಸರ್ ಕರ್ನಲ್ ಎಸ್. ದರ್ಶನ್, ಎಡಮ್ ಆಫೀಸರ್ ಶಂಕರ ಯಾದವ್, ಸುಬೇದಾರ್ ಮೇಜರ್ ನಿಲೇಶ್ ದೇಸಾಯಿ, ಕೆಎಲ್‌ಇ ಜಂಟಿ ಕಾರ್ಯದರ್ಶಿ ಡಾ.ಪ್ರಕಾಶ್ ಕಡಕೋಳ, ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಎಸ್. ಮೇಲಿನಮನಿ, ಕಾಲೇಜಿನ ಎನ್‌ಸಿಸಿ ಅಧಿಕಾರಿ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.