ಜಿಲ್ಲೆ

ಮಂಗಳೂರಿನಲ್ಲಿ ಶೂಟೌಟ್

Dakshina Kannada

ಮಂಗಳೂರು: ನಗರದ ಫಳ್ನೀರ್‌ನಲ್ಲಿ ಶುಕ್ರವಾರ ಸಂಜೆ ಶೂಟೌಟ್ ನಡೆದಿದ್ದು, ಯುವಕನೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಇಲ್ಲಿನ ಹೊಟೇಲ್ ಬಳಿ ಘಟನೆ ನಡೆದಿದೆ. ನಾಲ್ಕು ಮಂದಿಯ ತಂಡವೊಂದು ಹೊಟೇಲ್ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದು ಬಳಿಕ ನಾಡ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ. ಗುಂಡು ಸಿಬ್ಬಂದಿಯ ಬೆನ್ನಿನ ಕೆಳ ಭಾಗಕ್ಕೆ ಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದು, ಪೊಲೀಸರು ಅವರನ್ನು ಚದುರಿಸುವ ಪ್ರಯತ್ನ ಮಾಡುತ್ತಿದ್ದಾರೆ.