Kalaburagi Shoot out 
ಜಿಲ್ಲೆ

ಕಲಬುರಗಿಯಲ್ಲಿ ಹಂತಕನಿಗೆ ಗುಂಡೇಟು

ಬಾಬುರಾವ ಯಡ್ರಾಮಿ

ರೌಡಿ ಶೀಟರ್ ಖಲೀಲ್ ಮರ್ಡರ್ ಕೇಸ್ | ಆಜಾದಪುರ ಬಳಿ ಶೂಟೌಟ್ ಫೈರ್ ಮಾಡಿದ ಸುಶೀಲಕುಮಾರ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕೊಲೆ ಪ್ರಕರಣದಲ್ಲಿ ವಶಕ್ಕೆ ತೆಗೆದುಕೊಂಡಿದ್ದ ಆರೋಪಿತ ಖಾಕಿಪಡೆಗೆ ಯಾಮಾರಿಸಿ ಠಾಣೆಯಿಂದ ಪರಾರಿಯಾಗಿದ್ದ

ಆರೋಪಿತನ ಮೇಲೆ ಸೋಮವಾರ ರಾತ್ರಿ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ತೊಗರಿ ನಾಡು ಕಲಬುರಗಿಯಲ್ಲಿ ಮತ್ತೇ ಕಾಡತೂಸು ಸದ್ದು ಮಾಡಿದೆ.

ಮಿರ್ಜಾ ಕೌಸರ್ (೩೫) ಎಂಬಾತನೇ ಗುಂಡೇಟು ತಿಂದು ಆಸ್ಪತ್ರೆಗೆ ಸೇರಿರುವ ಕೊಲೆ ಕೇಸಿನ ಆಪಾದಿತ. ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಲಗತ್ತಿ ಕ್ರಾಸ್ ಹತ್ತಿರದಲ್ಲಿ ಕಳೆದ ಮಂಗಳವಾರ ತಡರಾತ್ರಿ ರೌಡಿ ಶೀಟರ್ ಖಲೀಲ್ ಅಹ್ಮದ್ ಅಲಿಯಾಸ್ ಹಮಾಲವಾಡಿ ಕಲ್ಯಾನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪ ಇತನ ಮೇಲಿದೆ. ಆತನ ದಾಳಿಯಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಈರಣ್ಣ, ಯಾಸೀನ್, ಶಂಶುದ್ಧೀನ್ ಇತರರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಳಿಸಲಾಗಿದೆ.

ರೌಡಿ ಶೀಟರ್ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಸೋಮವಾರ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ವಿಶ್ವವಿದ್ಯಾಲಯ ಠಾಣೆಗೆ ಕರೆ ತಂದಿದ್ದರು. ಕೆಲಹೊತ್ತು ವಿಚಾರಣೆ ಸಹ ನಡೆಸಿದ್ದರು.ಬಳಿಕ ಕೆಲ ಹೊತ್ತು ಠಾಣೆಯಲ್ಲಿ ಕುಳ್ಳಿರಿಸಿದಾಗ ಪೊಲೀಸರಿಗೆ ಚಳ್ಳೆಹಣ್ಣ ತಿನ್ನಿಸಿ ತಪ್ಪಿಸಿಕೊಂಡು ಹೋಗಿದ್ದಾನೆ. ಹಿಡಿಯಲು ಕರ್ತವ್ಯದಲ್ಲಿದ್ದ ಸಿಬ್ಬಂದಿ ಬೆನ್ನಟ್ಟಿದರೂ ಸಿಗದೆ ಕಣ್ಮರೆಯಾಗಿದ್ದ.

ತಪಿಸಿಕೊಂಡ ಬೆನ್ನಲ್ಲಿಯೇ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ನಾಯಕ, ಎಸಿಪಿ ರಾಜಣ್ಣ ಜಿ.ಡಿ ಮಾರ್ಗದರ್ಶನದಲ್ಲಿ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಆರಂಭಿಸಿದರು.ಆತನನ್ನು ಪತ್ತೆ ಮಾಡಲು ವಿಶ್ವವಿದ್ಯಾಲಯ ಠಾಣೆಯ ಇನ್‌ಸ್ಪೆಕ್ಟರ್ ಸುಶೀಲಕುಮಾರ, ಉಪನಗರ ಠಾಣೆಯ ಇನ್‌ಸ್ಪೆಕ್ಟರ್ ಸಂತೋಷ ತಟ್ಟೆಪಳ್ಳಿ ನೇತೃತ್ವದಲ್ಲಿ ಎರಡು ತಂಡಗಳು ಶೋಧ ಕಾರ್ಯ ಶುರುವಿಟ್ಟರು. ಅಲ್ಲದೆ ನಗರದ ವಿವಿಧ ಕಡೆಗಳಲ್ಲಿ ಪೊಲೀಸರು ನಿಗಾ ಇರಿಸಿದ್ದರು. ವಿವಿ ಹಾಗೂ ಉಪನಗರ ಠಾಣೆಯವರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ಸೋಮವಾರ ರಾತ್ರಿ ೭-೩೦ ಗಂಟೆ ಸುಮಾರಿಗೆ ತಪ್ಪಿಸಿಕೊಂಡು ಹೋಗಿದ್ದ ಮಿರ್ಜಾ ಕೌಸರ್ ಆಜಾದಪುರ ಸಮೀಪದ ಜೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರ ಬಳಿಯಲ್ಲಿದ್ದಾನೆ ಎಂಬ ಮಾಹಿತಿಯಂತೆ ಅಲ್ಲಿಗೆ ತೆರಳಿ, ಶರಣಾಗುವಂತೆ ಸೂಚಿಸಿದರೂ, ಆಗದೆ, ಮರಳಿ ಪೊಲೀಸರ ಮೇಲೆಯೇ ದಾಳಿ ಮಾಡಲು ಯತ್ನಿಸಿದ್ದಾನೆ. ಆಗ ಸಿಬ್ಬಂದಿ ರಕ್ಷಣೆ ಮತ್ತು ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಸುಶೀಲಕುಮಾರ ರಿವಾಲ್ವಾರ್‌ನಿಂದ ಗುಂಡು ಹಾರಿಸಿದಾಗ, ಕೌಸರ್‌ನ ಕಾಲಿಗೆ ಗುಂಡು ಹೊಕ್ಕಿದೆ. ಆತನನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆ ಕರೆ ತಂದು ದಾಖಲಿಸಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಸುಶೀಲಕುಮಾರ ಗುಂಡು ಹಾರಿಸಿದ್ದಾರೆ

ರೌಡಿ ಶೀಟರ್ ಕೊಲೆ ಪ್ರಕರಣದಲ್ಲಿ ಬಂಧಿಸಿ ಕರೆ ತಂದಿದ್ದ ಮಿರ್ಜಾ ಕೌಸರ್ ಠಾಣೆಯಿಂದ ತಪ್ಪಿಸಿಕೊಂಡು ಹೋಗಿದ್ದ. ಆತನನ್ನು ಪತ್ತೆ ಮಾಡಲು ಹೋಗಿದ್ದಾಗ ಪೊಲೀಸರ ಮೇಲೆ ದಾಳಿ ಮಾಡಿದ್ದಾಗ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಸುಶೀಲಕುಮಾರ ಗುಂಡು ಹಾರಿಸಿದ್ದಾರೆ. ಆತನ ಕಾಲಿಗೆ ಗುಂಡೇಟು ತಗುಲಿದೆ. ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯಗೊಂಡಿದ್ದಾರೆ.

| ಡಾ.ಶರಣಪ್ಪ ಎಸ್.ಡಿ

ನಗರ ಪೊಲೀಸ್ ಆಯುಕ್ತ

ಮಾತುಕತೆಗೆ ಕರೆಸಿ ಕೊಲೆ

ನಿವೇಶನ ವಿವಾದ ಹಿನ್ನೆಲೆಯಲ್ಲಿ ರೌಡಿ ಶೀಟರ್ ಖಲೀಲ್ ಅಹ್ಮದ್ ಅಲಿಯಾಸ್ ಕಲ್ಯಾನನ್ನು ಮಾತುಕತೆಗೆ ಕರೆಸಿಕೊಂಡು ಮಾಲಗತ್ತಿ ಕ್ರಾಸ್ ಬಳಿ ಕಳೆದ ಮಂಗಳವಾರ ತಡರಾತ್ರಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಈಗ ಗುಂಡೇಟು ತಿಂದಿರುವ ಮಿರ್ಜಾ ಕೌಸರ್ ಪಾತ್ರ ಪ್ರಮುಖವಾಗಿತ್ತು. ಆತ ಮತ್ತು ಗ್ಯಾಂಗಿನವರು ಸೇರಿಕೊಂಡು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದರು.

ಹಮಾಲವಾಡಿ ಖಲೀಲ್ ಸ್ಕೂಟಿಯಲ್ಲಿ ಒಬ್ಬನೇ ತೆರಳಿದ್ದು, ಮಾತನಾಡುವ ವೇಳೆ ಮಾರಕಾಸ್ತçಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಖಲೀಲï ವಿರುದ್ಧ ಹ¯್ಲೆ, ಕೊಲೆ ಸೇರಿ ಸುಮಾರು ೨೧ ಪ್ರಕರಣಗಳಿದ್ದವು.