ಜಿಲ್ಲೆ

ಭಾವಪ್ರಚಾರ ಪರಿಷತ್ತಿನ 9ನೇ ವಾರ್ಷಿಕ ಸಮ್ಮೇಳನದಿಂದ ಶೋಭಾಯಾತ್ರೆ

ಮೈಸೂರು: ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನ 9ನೇ ವಾರ್ಷಿಕ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಶೋಭಾಯಾತ್ರೆ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿತು. ನಾರಾಯಣಶಾಸ್ತ್ರಿ ರಸ್ತೆಯ ವಿವೇಕ ಸ್ಮಾರಕದ ಬಳಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಯಾತ್ರೆಗೆ ಹಸಿರು ನಿಶಾನೆ ತೋರಿದರು. ವೀರಗಾಸೆ, ತಮಟೆ, ನಗಾರಿ ತಂಡಗಳೊಂದಿಗೆ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಹೊತ್ತ ರಥ ಸದ್ವಿದ್ಯಾ ಶಾಲೆ, ನಾರಾಯಣಶಾಸ್ತ್ರಿ ರಸ್ತೆಯ ಶ್ರೀ ರಾಘವೇಂದ್ರಸ್ವಾಮಿ ಮಠ, ದಿವಾನ್ಸ್ ರಸ್ತೆ, ಶಿವರಾಂಪೇಟೆ, ಡಿ.ದೇವರಾಜ ಅರಸು ರಸ್ತೆ ಮೂಲಕ ವಿವೇಕ ಸ್ಮಾರಕ ಸ್ಥಳಕ್ಕೆ ಮರಳಿ ಬಂದು ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ತೆರಳಿದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಸಂದೇಶದ ಘೋಷಣೆಗಳನ್ನು ಕೂಗಿದರು.