school program 
ಜಿಲ್ಲೆ

ಜೀವನದಲ್ಲಿ ಅಕ್ಷರ ಕಲಿಕೆ ಮುಖ್ಯ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ವಿದ್ಯೆ ಇಲ್ಲದೆ ಜೀವನ ನಡೆಸುವುದು ಕಷ್ಟ. ಶಿಕ್ಷಕರ ಸಹಕಾರದಿಂದ ಸಮಾಜದಲ್ಲಿ ತಲೆ ಎತ್ತಿ ಓಡಾಡುವಂತಾಗಿದೆ.
ಕಲಿಕೆ ಮುಖ್ಯವಾಗಿದ್ದು, ಶಿಕ್ಷಣ ಧಾರೆ ಎರೆದ ಶಿಕ್ಷಕರು ಪೂಜನೀಯರು ಎಂದು ಕರುನಾಡ ವಿಜಯ ಸೇನೆ ತಾಲೂಕು ಅಧ್ಯಕ್ಷ ವಸಂತ ಕುಮಾರ್ ಹೇಳಿದರು.
ಸೋಂಪುರ ಹೋಬಳಿ ಶಿವಗಂಗಾ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನೆ, ಸ್ನೇಹಮಿಲನದಲ್ಲಿ ಮಾತನಾಡಿದರು.
ನಿವೃತ್ತ ಶಿಕ್ಷಕ ನಂಜಪ್ಪ ಮಾತನಾಡಿ, ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ 30 ವರ್ಷಗಳ ನಂತರವೂ ಗುರುವಂದನೆ ಮೂಲಕ ಶಾಲೆಗೆ ಮತ್ತು ಗುರುಗಳಿಗೆ ಸಲ್ಲಿಸುತ್ತಿರುವ ಗೌರವವೇ ಆದರ್ಶ. ನಿಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ ನೆಮ್ಮದಿಯುತ ಜೀವನ ಕಟ್ಟಲು ನೆರವಾಗಿ. ಮಕ್ಕಳನ್ನು ಮೋಬೈಲ್‌ನಿಂದ ದೂರವಿಟ್ಟು ಅವರನ್ನು ದೇಶದ ಉತ್ತಮ ಪ್ರಜೇಯಾಗಿ ರೂಪಿಸಿ ಎಂದರು.
ಶಿವಗಂಗೆ ಪ್ರೌಢಶಾಲೆಯ ಗ್ರಂಥಾಲಯಕ್ಕೆ 1993-1994ನೇ ಸಾಲಿನ ವಿದ್ಯಾರ್ಥಿಗಳು ಎರಡು ಬೀರೋ, 50 ಪ್ಲಾಸ್ಟಿಕ್ ಖುರ್ಚಿ ಹಾಗೂ ಪುಸ್ತಕಗಳನ್ನು ಕೊಡುಗೆ ನೀಡಿದರು.
ಅವೇರಹಳ್ಳಿ ವೆಂಕಟಾಚಲಮೂರ್ತಿ, ವಿದ್ಯಾರ್ಥಿಗಳಾದ ಬರಗೇನಹಳ್ಳಿ ಎಂ.ಕುಮಾರ, ಮರಿಭ್ಯೇರಯ್ಯ, ಶಿವಗಂಗೆಯ ನಾಗೇಶ ನಾಯಕ, ಹನುಂತರಾಜು, ಹೋನ್ನೇನಹಳ್ಳಿ ಎಚ್.ಪಿ.ಕುಮಾರ, ಈಶ್ವರಯ್ಯ, ಗಂಗರಾಜು, ಕೆರೆಕತ್ತಿಗನೂರು ಸುರೇಶ, ಕೆಂಗಲ್ ಕುಮಾರ, ಹನುಮಂತರಾಜು, ದಾಬಸ್‌ಪೇಟೆ ನಾಗೇಶ ಇದ್ದರು.